ಬ್ರಹ್ಮಾವರ: ದಿನಾಂಕ : 14-06-2024(ಹಾಯ್ ಉಡುಪಿ ನ್ಯೂಸ್) ದೇವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯವರಿಗೆ ಆಟೋ ರಿಕ್ಷಾದಲ್ಲಿ ಬಂದ ತಂಡವೊಂದು ಹಲ್ಲೆ ನಡೆಸಿ ಕತ್ತಿ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.
ಬ್ರಹ್ಮಾವರ ಸಾಲಿಗ್ರಾಮದ ಚಿತ್ರಪಾಡಿ ನಿವಾಸಿ ನಾಗರಾಜ್ ಎಂಬವರು ಬಾರಕೂರು ಮೂಡುಕೇರಿ ವೇಣುಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಎಂದು ನ್ಯಾಯಾಲಯದಲ್ಲಿ ನೀಡಿದ ಖಾಸಗಿ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 03/04/2024 ರಂದು ಮಧ್ಯಾಹ್ನ ನಾಗರಾಜ್ ರವರು ಪಾರ್ಕಿಂಗ್ ಸ್ಥಳದ ಬಳಿ ಇದ್ದಾಗ ಅಲ್ಲಿಗೆ KA-20-AB-6562 ನೇ ಆಟೋರಿಕ್ಷಾದಲ್ಲಿ ಆರೋಪಿಗಳು ಅಲ್ಲಿಗೆ ಬಂದಿಳಿದು, ಅದರಲ್ಲಿ 1ನೇ ಆರೋಪಿ ನಾಗೇಶ್ ಎಂಬವನು ನಾಗರಾಜ್ ರನ್ನು ಉದ್ಧೇಶಿಸಿ ಅವಾಚ್ಯವಾಗಿ ಬೈದಿದ್ದು, ಆಗ 2ನೇ ಆರೋಪಿ ಶ್ರೀನಿವಾಸ ಅವಾಚ್ಯವಾಗಿ ಬೈದು ನಾಗರಾಜ್ ರವರ ಮೇಲೆ ಹಲ್ಲೆ ಮಾಡಿದ್ದು, ಅಲ್ಲದೇ ಆರೋಪಿಗಳಾದ 1, ನಾಗೇಶ್ ಮತ್ತು 2 ನೇ ಆರೋಪಿ ಶ್ರೀನಿವಾಸ ಮತ್ತು ರಿಕ್ಷಾದಲ್ಲಿ ಬಂದಿದ್ದ ಇತರ ಮೂವರು ಸೇರಿ ನಾಗರಾಜ್ ರನ್ನು ಗಟ್ಟಿಯಾಗಿ ಹಿಡಿದು, ಹೋಗಲು ಬಿಡದೇ ಅವರ ಎದೆ, ಹೊಟ್ಟೆ, ಕೆನ್ನೆಗೆ ಹಲ್ಲೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರಿದ್ದಾರೆ.
ನಂತರ 1 ನೇ ಆರೋಪಿ ನಾಗೇಶನು ರಿಕ್ಷಾದಲ್ಲಿ ತಂದಿದ್ದ ಹರಿತವಾದ ಕತ್ತಿಯನ್ನು ಹಿಡಿದು ನಿನ್ನನ್ನು ಕತ್ತಿಯಿಂದ ಈಗ ಕತ್ತರಿಸಿ ಹಾಕುತ್ತೇನೆ ಎಂದು ಹೇಳಿ ಕತ್ತಿಯನ್ನು ತೋರಿಸಿರುತ್ತಾನೆ ಹಾಗೂ ನಾಗೇಶ್ ಮತ್ತು 2 ನೇ ಆರೋಪಿ ಶ್ರೀನಿವಾಸ ನವರು ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.
ನಾಗರಾಜ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 323, 341, 143, 147, 148, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.