Spread the love

ಮಲ್ಪೆ: ದಿನಾಂಕ: 14-06-2024 ( ಹಾಯ್ ಉಡುಪಿ ನ್ಯೂಸ್) ಕುಮ್ಕಿ ಜಾಗ ವೊಂದರಲ್ಲಿ ವಾಸವಾಗಿದ್ದ ಮಹಿಳೆ ಗೆ ಹೋಮ್ ಸ್ಟೇ ಕಟ್ಟಲಿದೆ ಎಂದು ಹೇಳಿ ಕೊಂಡು ಬಂದ ಏಳು ಜನರ ತಂಡ ಮನೆ ಖಾಲಿ ಮಾಡುವಂತೆ ಬೆದರಿಸಿ ಹಲ್ಲೆ ಮಾಡಲು ಬಂದಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಲ್ಪೆ , ಕೊಡವೂರು ನಿವಾಸಿ ಸುಂದರಿ ಲಿಟಾ ಡಿಸಿಲ್ವಾ ಅವರು 40 ವರ್ಷಗಳಿಂದ ಸಮುದ್ರ ಪಕ್ಕದ ಕುಮ್ಕಿ ಜಾಗದಲ್ಲಿ ವಾಸವಿದ್ದೇನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅವರಿಗೆ ಇದುವರೆಗೆ ತಹಶೀಲ್ದಾರರು, ಜಿಲ್ಲಾಡಳಿತವಾಗಲಿ ಯಾವುದೇ ನೊಟೀಸ್‌ ನೀಡಿರುವುದಿಲ್ಲ  ಎಂದಿದ್ದಾರೆ. ಈ ಜಾಗ ನನಗೆ ಸಂಬಂಧಪಟ್ಟ ದ್ದು ಎಂದು ಹೇಳಿ ಕಳೆದ 4-5 ತಿಂಗಳಿನಿಂದ ಈ ಜಾಗದಲ್ಲಿ ಹೋಮ್‌ ಸ್ಟೇ ಕಟ್ಟುವುದಾಗಿ ಹೇಳಿ ನೀವು ಇಲ್ಲಿಂದ ಬಿಟ್ಟು ಹೋಗ ಬೇಕು ಎಂದು ಡಾಲ್ಪಿ, ವಸುಂದರ್‌ , ಗುರುರಾಜ , ಹರೀಶ್‌ ಎಂಬವರು ಬೆದರಿಕೆ ಹಾಕಿದ್ದು, ದಿನಾಂಕ 04/06/2024 ರಂದು  ಬೆಳಿಗ್ಗೆ  KA-30-M-9141 ಜೆಸಿಬಿ  ವಾಹನ ದೊಂದಿಗೆ  ಡೊಲ್ಪಿ, ವಸುಂದರ ಅವರು ಹೇಳಿದ್ದಾರೆ ಎಂದು ಕೊಂಡು ಬಂದ ನೇಜಾರಿನ ಪ್ರಕಾಶ್‌ , ಅಂಬಲಪಾಡಿ ಅಶೋಕ , ಪ್ಯಾಮಿಲಿ ಪ್ಯಾಶನ್‌ ಸೂಪರ್‌ ವೈಸರ್‌ ಎಂದು ಹೇಳುವ ಪ್ರಮೀಳ ಹಾಗೂ ಇತರ ಏಳು ಜನ ಮನೆಯ ಸುತ್ತಲಿನ ಬೇಲಿಯನ್ನು ಕಿತ್ತು ಎಸೆದಿದ್ದು, ಅರೋಪಿತರು ಪದೇ ಪದೇ ಸುಂದರಿ ಲಿಟಾ ಡಿಸಿಲ್ವಾ ರವರ ಜಾಗದ ಸುತ್ತಲಿನ ಬೇಲಿಗಳನ್ನು ಕಿತ್ತು ಬೆದರಿಸಿ ಹಲ್ಲೆ ಮಾಡಲು ಬಂದಿದ್ದಾರೆ ಎಂದು ದೂರು ನೀಡಿದ್ದಾರೆ.

ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 506, 509 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!