ಉಡುಪಿ : ದಿನಾಂಕ:10-06-2024(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಮನೆಬಿಟ್ಟು ಹೋಗು ಎಂದು ಅವಾಚ್ಯವಾಗಿ ಬೈದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು ಸಸಿಹಿತ್ಲು ನಿವಾಸಿ ಗುಣ ಲಕ್ಷ್ಮೀ ಎಂಬವರ ವಿವಾಹವು ನಿತಿನ್ ಕುಮಾರ್ ಎಂಬವರೊಂದಿಗೆ ದಿನಾಂಕ: 23/02/2023 ರಂದು ಶ್ರೀಕ್ಷೇತ್ರ ಧರ್ಮಸ್ಥಳ ದಲ್ಲಿ ಗುರು ಹಿರಿಯರು ನಿಶ್ಚಯಿಸಿದಂತೆ ನಡೆದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
. ಮದುವೆಯ ಸಮಯದಲ್ಲಿ ಗುಣಲಕ್ಷ್ಮೀ ಯವರ ತಾಯಿ ಮನೆಯವರು 15,00,000/- ಮೌಲ್ಯದ ಚಿನ್ನಾಭರಣವನ್ನು ಹಾಕಿ ಮದುವೆ ಹಾಗೂ ಔತಣಕೂಟಕ್ಕೆ 1 ನೇ ಆರೋಪಿ ಗಂಡ ನಿತಿನ್ ಕುಮಾರ್ ಹೇಳಿದ ಹಾಗೆ 5,00,000/- ರೂಪಾಯಿ ಖರ್ಚು ಮಾಡಿರುತ್ತಾರೆ ಎಂದಿದ್ದಾರೆ. ಮದುವೆಯಾದ ನಂತರ ಗುಣಲಕ್ಷ್ಮೀ ಯವರು ಗಂಡನೊಂದಿಗೆ ದೊಡ್ಡಣಗುಡ್ಡೆಯ ಮನೆಯಲ್ಲಿ ವಾಸವಿದ್ದಾಗ 2 ನೇ ಆಪಾದಿತೆ ಶಾಂತಾ ರವರು ಮದುವೆಯಾದ 15 ದಿನಗಳಿಂದಲೇ ಗುಣಲಕ್ಷ್ಮೀಯವರನ್ನು ಉದ್ದೇಶಿಸಿ ವ್ಯಂಗ್ಯವಾಗಿ ಮಾತಾನಾಡಿ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದರು ಎಂದು ದೂರಿದ್ದಾರೆ.
ಗಂಡ ನಿತಿನ್ ಕುಮಾರ್ ನು ಮಾನಸಿಕವಾಗಿ ಹಿಂಸಿಸುತ್ತಿದ್ದನು ಹಾಗೂ ಉಳಿದ ಆರೋಪಿತರಾದ 3.ವಿಶ್ವನಾಥ4.ಶಕುಂತಲ,5.ಸಂಜಿತ್,6. ಶಾಶ್ವತ್,7. ಪ್ರಕಾಶ್ ,8. ಪ್ರಶಾಂತ್ 9. ಧರ್ಮ ಇವರೆಲ್ಲರೂ ಸೇರಿ ಗುಣಲಕ್ಷ್ಮೀ ಯವರಿಗೆ ಮನೆಬಿಟ್ಟು ಹೊರಗೆ ಹೋಗು ಎಂದು ಅವಾಚ್ಯವಾಗಿ ಬೈಯ್ದಿರುತ್ತಾರೆ ಎಂದು ದೂರಿದ್ದಾರೆ.
ಗುಣಲಕ್ಷ್ಮೀ ಯವರು ದಿನಾಂಕ:30/03/2024 ರಂದು ತನ್ನ ತಾಯಿ ಮನೆಗೆ ಹೋಗಿದ್ದು, ನಂತರ ದಿನಾಂಕ: 30/05/2024 ರಂದು ವಾಪಾಸು ಗಂಡನ ಮನೆಗೆ ಬರುತ್ತಿರುವ ವಿಚಾರ ತಿಳಿದು ಗಂಡ ನಿತಿನ್ ಕುಮಾರ್ ಮತ್ತು 2ನೇ ಆಪಾದಿತೆ ಶಾಂತಾರವರು ಮನೆಗೆ ಬೀಗ ಹಾಕಿ ಹೋಗಿದ್ದು, ಈ ಬಗ್ಗೆ ವಿಚಾರಿಸಲು ಗುಣಲಕ್ಷ್ಮೀ ಯವರು ಗಂಡ ನಿತಿನ್ ಕುಮಾರ್ ನಿಗೆ ಪೋನ್ ಮಾಡಿದರೆ ಪೋನ್ ಸ್ವೀಕರಿಸದೇ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದು, ಆಪಾದಿತರುಗಳು ಎಲ್ಲರೂ ಸೇರಿ ಗುಣಲಕ್ಷ್ಮೀ ಯವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 498(ಎ), 504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.