ಬ್ರಹ್ಮಾವರ: ದಿನಾಂಕ 02/05/2024 (ಹಾಯ್ ಉಡುಪಿ ನ್ಯೂಸ್) ಸೈಬ್ರಕಟ್ಟೆ ಪರಿಸರದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ಕಾ&ಸು) ತೇಜಸ್ವಿ ಟಿ ಐಯವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವಿ ಟಿ ಐ ರವರು ದಿನಾಂಕ: 02-05-2024 ರಂದು ಠಾಣೆಯ ಸಿಬ್ಬಂದಿಯವರೊಂದಿಗೆ ರೌಂಡ್ಸ್ ನಲ್ಲಿರುವಾಗ ಸಾರ್ವಜನಿಕರು ಕರೆಮಾಡಿ ನೀಡಿದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರೊಂದಿಗೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮದ ಶಿರೂರು ಮೂರುಕೈನಿಂದ ಸೈಬ್ರಕಟ್ಟೆ ಹೋಗುವ ದಾರಿಯಲ್ಲಿ ತೆರೆದ ಶೆಡ್ಡಿಗೆ ದಾಳಿ ಮಾಡಿದ್ದು ಅಲ್ಲಿ ಬಟ್ಟೆಯನ್ನು ಹಾಸಿಕೊಂಡು ಇಸ್ಪೀಟ್ ಎಲೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು 4 ಜನ ಆರೋಪಿಗಳಾದ 1]ಭಾಸ್ಕರ, (68) ಹೆಗ್ಗುಂಜೆ ಗ್ರಾಮ 2]ಬೆಳ್ಳ(62) ಬಿಲ್ಲಾಡಿ 3]ಪರಮೇಶ್ವರ (53) ಹೆಗ್ಗುಂಜೆ 4]ನಿಲೇಶ್ (41) ಬಿಲ್ಲಾಡಿ ಎಂಬ ವರುಗಳು ಅಂದರ್ ಬಾಹರ್ ಎಂದು ಹೇಳುತ್ತಿದ್ದರು ಎನ್ನಲಾಗಿದೆ .
ಅವರನ್ನು ಪೊಲೀಸರು ಹಿಡಿದು ವಿಚಾರಿಸಿದಾಗ ಅಂದರ್ ಬಾಹರ್ ಆಡುತ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.ಅವರನ್ನು ಬಂಧಿಸಿ ಅಂದರ್ ಬಾಹರ್ ಜುಗಾರಿ ಆಡಲು ಬಳಸಿದ್ದ ಕೆಂಪು ಹೂಗಳಿರುವ ಬಟ್ಟೆ, ರೂ. 2150/- ಹಣ ಹಾಗೂ ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ 87 KP Act ನಂತೆ ಪ್ರಕರಣ ದಾಖಲಾಗಿದೆ.