Spread the love

ಉಡುಪಿ: ದಿನಾಂಕ: 12-05-2024 (ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಹಲ್ಲೆ ನಡೆಸಿ ಇದೀಗ ಜೀವನ ನಿರ್ವಹಣೆಗೆ ಹಣವನ್ನೂ ನೀಡದೆ ಮಾನಸಿಕ ವಾಗಿ ದೈಹಿಕ ವಾಗಿ ಹಲ್ಲೆ ನಡೆಸುತ್ತಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಗಿಳಿಯಾರು ಗ್ರಾಮದ ನಿವಾಸಿ ಶ್ರೀಮತಿ ಸುಮ.ಜಿ,(38) ಅವರ ಮದುವೆ ದಿನಾಂಕ 30/04/2023 ರಂದು ಉಡುಪಿ ತಾಲೂಕು ಬೈಲೂರು ನಾಗಶ್ರೀ ಸಭಾಭವನದಲ್ಲಿ ನೆರವೇರಿದ್ದು,  ಗಂಡನಾದ ಗಿರೀಶ್‌ ಅವರಿಗೆ ಹಾಗೂ ಶ್ರೀಮತಿ ಸುಮ.ಜಿ ಅವರಿಗೆ ಇಬ್ಬರಿಗೂ ಇದು  2 ನೇ ಮದುವೆಯಾಗಿದ್ದು, ಶ್ರೀಮತಿ ಸುಮ.ಜಿ ಅವರ ಮೊದಲನೆಯ ವೈವಾಹಿಕ ಜೀವನದಲ್ಲಿ ಸುಗತ್ ಎಂಬ ಮಗನಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆ ಪೂರ್ವದಲ್ಲಿ ಆರೋಪಿತರು 8 ಲಕ್ಷ ರೂಪಾಯಿ ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟು, ವರದಕ್ಷಿಣೆ ಹಣ ಕೊಡದೇ ಇದ್ದಲ್ಲಿ ಮದುವೆ ಮಾತುಕತೆ ಮುರಿಯುವುದಾಗಿ ಬೆದರಿಕೆ ಹಾಕಿ, ಒತ್ತಾಯ ಪೂರ್ವಕವಾಗಿ 6 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು 1 ನೇ ಆರೋಪಿ ಗಂಡ ಗಿರೀಶ್ ಪಡೆದುಕೊಂಡಿರುತ್ತಾರೆ ಎಂದು ದೂರಿದ್ದಾರೆ.

ಮದುವೆ ನಂತರ ಶ್ರೀಮತಿ ಸುಮ.ಜಿ ಅವರು ತನ್ನ ಮಗನೊಂದಿಗೆ ಬ್ರಹ್ಮಾವರ ತಾಲೂಕು ಗಿಳಿಯಾರು ಗ್ರಾಮದ ಕೋಟ ಎಂಬಲ್ಲಿರುವ  ಗಂಡ ಗಿರೀಶ್ ನ ಮನೆಗೆ ವೈವಾಹಿಕ ಜೀವನ ನಡೆಸಲು ಬಂದಿದ್ದು, ಮದುವೆ ಆದ 1 ತಿಂಗಳ ನಂತರ ಗಂಡ  ಗಿರೀಶ ನು ಆತನ ಅಕ್ಕ ಗೀತಾ ಯಾನೆ ರತ್ನಾ ಅವರೊಂದಿಗೆ ಸೇರಿಕೊಂಡು ಶ್ರೀಮತಿ ಸುಮ.ಜಿ ಅವರಿಗೆ  ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ ಎಂದು ದೂರಿದ್ದಾರೆ.

ದಿನಾಂಕ 26/03/2024 ರಂದು ಬೆಳಗ್ಗೆ 8:30 ಗಂಟೆಗೆ  ಆರೋಪಿ ಗಂಡ ಗಿರೀಶ ನು ಶ್ರೀಮತಿ ಸುಮ.ಜಿ ಯವರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿ ಮನೆಗೆ ಬರುವುದಿಲ್ಲ ಎಂದು ಹೇಳಿ ಮನೆ ಬಿಟ್ಟು ಹೋದವರು ಅಂಗಡಿಯಲ್ಲಿಯೇ ಉಳಿದುಕೊಂಡು ಶ್ರೀಮತಿ ಸುಮ.ಜಿ ಯವರ ಜೀವನ ನಿರ್ವಹಣೆಗೆ ಹಣವನ್ನು ನೀಡದೇ ಇದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 498(A), 323, 504 ಜೊತೆಗೆ 34 ಐ.ಪಿ.ಸಿ. ಕಲಂ: 3 ಡಿಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!