ಉಡುಪಿ: ದಿನಾಂಕ :10-05-2024(ಹಾಯ್ ಉಡುಪಿ ನ್ಯೂಸ್) ಉದ್ಯಾವರ ನಿವಾಸಿ ವಿವಾಹಿತ ಮಹಿಳೆ ಯೋರ್ವರಿಗೆ ಅವರ ಗಂಡ ಹಾಗೂ ಗಂಡನ ಮನೆಯವರು ವಿನಾಕಾರಣ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದು ಇದೀಗ ಗಂಡನು ಹೊಡೆದು ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ , ಉದ್ಯಾವರ ನಿವಾಸಿ ಶ್ರುತಿ (33) ಮತ್ತು ಆರೋಪಿ ಸೂರಜ್ ಎಂಬವರ ಮದುವೆ ದಿನಾಂಕ: 25-04-2018 ರಂದು ಉದ್ಯಾವರದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆದಿರುತ್ತದೆ ಎಂದು ಶ್ರುತಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ನಂತರ ಶ್ರುತಿಯವರು ಗಂಡನಾದ ಸೂರಜ್ ನು ವಾಸ ಇರುವ ಬೆಂಗಳೂರಿನ ಮನೆಗೆ ಸಾಂಸಾರಿಕ ಜೀವನ ನಡೆಸಲು ಹೋಗಿರುತ್ತಾರೆ ಎಂದಿದ್ದಾರೆ . ನಂತರದ ದಿನದಲ್ಲಿ ಗಂಡನಾದ ಸೂರಜ್ ನು ಶ್ರುತಿ ಯವರಿಗೆ ಹೊಡೆದು ಬಡಿದು ಅವಾಚ್ಯವಾಗಿ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಬಿಸಿರುತ್ತಾನೆ ಎಂದಿದ್ದಾರೆ. ನಂತರ ಗಂಡ ಸೂರಜ್ ನು ಬೆಂಗಳೂರಿನ ನಾಗರಬಾವಿಗೆ ಬೇರೆ ಮನೆಗೆ ಶಿಪ್ಟ್ ಆಗಿದ್ದು, ಶ್ರುತಿಯವರು ನಂತರ ಆ ಮನೆಯಲ್ಲಿ ಗಂಡ ಹಾಗೂ ಆತನ ತಂದೆ, ತಾಯಿಯೊಂದಿಗೆ ಜೀವನ ನಡೆಸುತ್ತಿದ್ದರು. ನಂತರದ ದಿನದಲ್ಲಿ ಕೂಡ ಸೂರಜ್ ನು ಶ್ರುತಿ ಯವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದನ್ನು ಮುಂದುವರೆಯಿಸಿದ್ದನು ಎಂದಿದ್ದಾರೆ.
ಈ ಬಗ್ಗೆ ಶ್ರುತಿ ಯವರು ಗಂಡ ಸೂರಜ್ ನ ತಂದೆಯಾದ ಆನಂದ ಅವರಲ್ಲಿ ಹೇಳಿದಾಗ ತಂದೆ ಆನಂದರವರು ಮಗನ ಪರ ವಹಿಸಿಕೊಂಡು ಶ್ರುತಿ ಯವರಿಗೆ ಬೈದು ಮಾನಸಿಕ ಹಿಂಸೆ ನೀಡಿರುತ್ತಾರೆ ಎಂದು ದೂರಿದ್ದಾರೆ.
ನಂತರ ಗಂಡ ಹಾಗೂ ಗಂಡನ ಮನೆಯವರ ಹಿಂಸೆಯನ್ನು ತಾಳಲಾರದೆ ಶ್ರುತಿ ಯವರು ತವರು ಮನೆಗೆ ಬಂದು , ವಾಪಾಸು 4 ತಿಂಗಳು ಬಿಟ್ಟು ವಾಪಾಸು ಶ್ರುತಿ ಯವರು ಗಂಡನ ಮನೆಗೆ ಬಂದಿದ್ದು, ಆ ಸಮಯದಲ್ಲಿ ಕೂಡ ಗಂಡ ಸೂರಜ್ ನು ಶ್ರುತಿ ಯವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದನ್ನು ಮುಂದುವರೆಯಿಸಿ ಮದುವೆ ಸಮಯದಲ್ಲಿ ಶ್ರುತಿ ಯವರಿಗೆ ಅವರ ತವರು ಮನೆಯವರು ಹಾಕಿದ ಚಿನ್ನಾಭರಣಗಳನ್ನು ಗಂಡ ಸೂರಜ್ ನು ತನ್ನ ಬಳಿ ಇರಿಸಿಕೊಂಡು , ಅದರಲ್ಲಿ ಸ್ವಲ್ಪ ಚಿನ್ನವನ್ನು ಪೈನಾನ್ಸ್ ನಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದಾನೆ ಎಂದಿದ್ದಾರೆ . ಪ್ರಸ್ತುತ ಶ್ರುತಿ ಯವರು ಉಡುಪಿ ಜಿಲ್ಲೆಯ ಉದ್ಯಾವರದ ಸಂಪಿಗೆನಗರ ಎಂಬಲ್ಲಿರುವ ತನ್ನ ಗಂಡನ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ 14/04/2024 ರಂದು ಮದ್ಯಾಹ್ನ 12:00 ಗಂಟೆಗೆ ಗಂಡ ಸೂರಜ್ ನು ಶ್ರುತಿ ಯವರಲ್ಲಿ ವಿನಾ ಕಾರಣ ಜಗಳ ತೆಗೆದು ಕೈಯಿಂದ ಹೊಡೆದು ತಲೆಯನ್ನು ಗೋಡೆಗೆ ಬಡಿದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾನೆ ಎಂದು ಶ್ರುತಿ ಯವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 498(ಎ), 323, 504, 506 ಜೊತೆಗೆ 34 ಐಪಿಸಿ & 3,4 ಡಿ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.