ಉಡುಪಿ: ದಿನಾಂಕ:07-05-2024 (ಹಾಯ್ ಉಡುಪಿ ನ್ಯೂಸ್) ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ವಂಚನೆಯ ಜಾಲಕ್ಕೆ ಸಿಲುಕಿ ಯುವಕನೋರ್ವ ಐದು ಲಕ್ಷ ರೂಪಾಯಿ ಕಳೆದುಕೊಂಡಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ .
ಉಡುಪಿ ,ಕಾಡುಬೆಟ್ಟು ನಿವಾಸಿ ಸುದರ್ಶನ (28) ಅವರಿಗೆ ಟೆಲಿಗ್ರಾಮ್ ನಲ್ಲಿ Flipkart page ಗೆ like ಮಾಡಿ ಟಾಸ್ಕ್ ನಡೆಸಿ ಹಣಗಳಿಸುವ ಬಗ್ಗೆ ದಿನಾಂಕ: 13-04-2024 ರಂದು ಮಾಹಿತಿ ಬಂದಿದ್ದು ,ಇದನ್ನು ನಂಬಿದ ಸುದರ್ಶನರವರು ಹಣವನ್ನು ಹೂಡಿಕೆ ಮಾಡಿದ್ದು ನಂತರದಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ಬರುವುದಾಗಿ ಸುದರ್ಶನ ರವರನ್ನು ನಂಬಿಸಿದ್ದು ಇದನ್ನು ನಂಬಿದ ಸುದರ್ಶನರವರು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ದಿನಾಂಕ: 06.05.2024 ರಂದು ಹಂತ ಹಂತವಾಗಿ ಒಟ್ಟು ರೂ. 5,05,000/- ಹಣವನ್ನು ಪಾವತಿಸಿದ್ದು ಆದರೆ, ಆರೋಪಿ ಗಳು ಲಾಭಾಂಶವನ್ನು ನೀಡದೇ ಸುದರ್ಶನ ರವರು ನೀಡಿದ ಹಣವನ್ನೂ ಹಿಂತಿರುಗಿಸದೇ ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66(C), 66(D)ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.