Spread the love
  • ಕುಂದಾಪುರ: ದಿನಾಂಕ: 06-05-2024(ಹಾಯ್ ಉಡುಪಿ ನ್ಯೂಸ್) ವಡೇರ ಹೋಬಳಿ ಗ್ರಾಮದ ಶ್ರೀ ಯಕ್ಷೇಶ್ವರಿ ದೇವ‌ಸ್ಥಾನದಲ್ಲಿ ಕಳ್ಳತನ ನಡೆದಿದೆ ಎಂದು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಕುಂದಾಪುರ ವಡೇರಹೋಬಳಿ ಗ್ರಾಮದ ನಿವಾಸಿ ಮಂಜುನಾಥ (60) ಎಂಬವರು ವಡೇರಹೋಬಳಿ ಗ್ರಾಮದ ಶ್ರೀ ಯಕ್ಷೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿದ್ದು ದಿನಾಂಕ 02/05/2024 ರಂದು ಬೆಳಿಗ್ಗೆ 10;00 ಗಂಟೆ ಸಮಯಕ್ಕೆ  ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ ದೇವಸ್ಥಾನಕ್ಕೆ ಚಿಲಕವನ್ನು ಹಾಕಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ದಿನಾಂಕ 02/05/2024 ರಂದು ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ   ಶ್ರೀ ಯಕ್ಷೇಶ್ವರಿ ದೇವಸ್ಥಾನದ   ಕಾರ್ಯದರ್ಶಿಯಾದ ಸಂತೋಷ ಎಂಬವರು  ದೇವಸ್ಥಾನಕ್ಕೆ ಹೋಗಿ ನೋಡುವಾಗ ಕಾಣಿಕೆ ಹುಂಡಿ ಇಲ್ಲವಾಗಿದ್ದು ಅವರು ಮಂಜುನಾಥ ರವರಿಗೆ ತಿಳಿಸಿದ್ದು, ನಂತರ ಮಂಜುನಾಥರವರು ಹಾಗೂ ಇತರರು ದೇವಸ್ಥಾನಕ್ಕೆ ಹೋಗಿ ನೋಡಿದಾಗ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯ ಜೊತೆ ತಾಮ್ರದ ಕೊಡಪಾನ ಹಾಗೂ ಹಿತ್ತಾಳೆಯ ದೊಡ್ಡ ದೀಪದ ಮಧ್ಯ ಭಾಗ ಕಾಣೆಯಾಗಿದ್ದು,ಕಾಣಿಕೆ ಹುಂಡಿಯಲ್ಲಿ ಸುಮಾರು ಅಂದಾಜು 15,000/-ರೂ ನಗದು ಹಣ ಹಾಗೂ ಸುಮಾರು 2 ಕೆಜಿ ತೂಕದ  ತಾಮ್ರದ ಕೊಡಪಾನ ಅಂದಾಜು 5,000/- ರೂಪಾಯಿ ಮತ್ತು ಸುಮಾರು 6 ಕೆಜಿ ಹಿತ್ತಾಳೆ ದೀಪ ಅಂದಾಜು 10,000/- ರೂಪಾಯಿ ಆಗಿದ್ದು ಕಳವಾದ ಸ್ವತ್ತಿನ ಮೌಲ್ಯ ಸುಮಾರು 30000/- ರೂಗಳಾಗಬಹುದು ಎಂದು  ಅಂದಾಜಿಸಲಾಗಿದೆ.
  • ಯಾರೋ ಕಳ್ಳರು ದಿನಾಂಕ 02-05-2024 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯ  ಮಧ್ಯಾವಧಿಯಲ್ಲಿ  ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 454, 380 ಐಪಿಸಿಯಂತೆ   ಪ್ರಕರಣ ದಾಖಲಾಗಿದೆ.

error: No Copying!