ಕೋಟ: ದಿನಾಂಕ 04/05/2024 (ಹಾಯ್ ಉಡುಪಿ ನ್ಯೂಸ್) ಕೋಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವಿ ಟಿ ಐ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವಿ ಟಿ ಐ ಅವರಿಗೆ ದಿನಾಂಕ:02-05-2024 ರಂದು ಬಂದ ಸಾರ್ವಜನಿಕ ಮಾಹಿತಿಯಂತೆ ಹೆಗ್ಗುಂಜೆ ಗ್ರಾಮದ ಶಿರೂರು ಮೂರುಕೈನಿಂದ ಸೈಬ್ರಕಟ್ಟೆ ಹೋಗುವ ದಾರಿಯ ಸುಶಿಲ ಎಂಬುವವರ ಮನೆಯ ಎದುರಿನ ತೆರೆದ ಶೆಡ್ಡಿಗೆ ದಾಳಿ ಮಾಡಿದ್ದು ಅಲ್ಲಿ ಬಟ್ಟೆಯನ್ನು ಹಾಸಿಕೊಂಡು ಇಸ್ಪೀಟ್ ಎಲೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು 1.ನಿತೇಶ್, 2. ಪರಮೇಶ್ವರ, 3.ಬೆಳ್ಳ, 4.ಭಾಸ್ಕರ ಎಂಬವರು ಅಂದರ್‌ಬಾಹರ್ ಆಡುತ್ತಿದ್ದಲ್ಲಿಗೆ ಕೂಡಲೇ ದಾಳಿ ನಡೆಸಿ ಬಟ್ಟೆ, ರೂಪಾಯಿ 2150/- ಹಣ ಹಾಗೂ ಇಸ್ಪೀಟ್ ಎಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.