Spread the love

ಕೋಟ: ದಿನಾಂಕ 23-04-2024 (ಹಾಯ್ ಉಡುಪಿ ನ್ಯೂಸ್) ಚಿನ್ನಾಭರಣ ಕಳ್ಳಸಾಗಾಣಿಕೆ ನಡೆಸುತ್ತಿದ್ದ ಕಾರನ್ನು ಕೋಟ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಸುಧಾ ಪ್ರಭು ರವರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ದಿನಾಂಕ:20-04-2024ರಂದು ಕೋಟ ಪೊಲೀಸ್‌ ಠಾಣೆಯ ಪಿ.ಎಸ್. ಐ. ಯವರಾದ  ಸುಧಾಪ್ರಭುರವರಿಗೆ ರಿಜಿಸ್ಟ್ರೇಷನ್ MH-02-BP-4500 ನಂಬ್ರದ ಕಾರು ಅನುಮಾನಾಸ್ಪದ ವಾಗಿ ಸಂಚರಿಸುತ್ತಿದ್ದು  ಈ ಕಾರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಮೇಲಾಧಿಕಾರಿಗಳು ಸೂಚಿಸಿದಂತೆ ಪಿಎಸ್ಐ ಸುಧಾ ಪ್ರಭು  ಹಾಗೂ ಸಿಬ್ಬಂದಿಯವರು ಸಾಯಂಕಾಲ 4:30 ಗಂಟೆಗೆ ಕಾರನ್ನು ಹಿಡಿಯಲು ಹೋದಾಗ ರಾ.ಹೆ. 66 ರ ಉಡುಪಿ ಕಡೆಯಿಂದ ಮೇಲಾಧಿಕಾರಿಗಳು ಸೂಚಿಸಿದ ಕಾರು ವೇಗವಾಗಿ ಬರುತ್ತಿದ್ದು, ಸಾಯಂಕಾಲ 4:45 ಗಂಟೆಗೆ ಕೋಟಾ ಜಂಕ್ಷನ್‌ ಬಳಿ ಕಾರನ್ನು ಪೊಲೀಸರು ನಿಲ್ಲಿಸಿದಾಗ ಕಾರಿನಲ್ಲಿ ಮೊಹಮ್ಮದ್‌ ಇರ್ಪಾನ್‌ (35), ಸೀತಾಮರಿ ಜಿಲ್ಲೆ ಬಿಹಾರ್‌ ರಾಜ್ಯ ಎಂಬ ವ್ಯಕ್ತಿ ಇದ್ದು ಆತನಲ್ಲಿ  ಕಾರಿನಲ್ಲಿ ಏನಿದೆ ಎಂದು ವಿಚಾರಿಸಿದಾಗ ಚಿನ್ನಾಭರಣಗಳಿರುವ ಬ್ಯಾಗ್‌ ಒಂದನ್ನು ತೋರಿಸಿರುತ್ತಾನೆ ಎನ್ನಲಾಗಿದೆ.

ಚಿನ್ನಾಭರಣಗಳನ್ನು ಹೊಂದಿರಲು ಅವುಗಳ ದಾಖಲೆಗಳನ್ನು ಹಾಜರುಪಡಿಸುವಂತೆ ತಿಳಿಸಿದಾಗ ಯಾವುದೇ ದಾಖಲೆಗಳು ಇರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾನೆ ಎಂದಿದ್ದಾರೆ.ಆತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ 98 ಕೆಪಿ ಕಾಯ್ದೆ ಯಂತೆ ಪ್ರಕರಣದ ದಾಖಲಾಗಿದೆ.

error: No Copying!