Spread the love

ಉಡುಪಿ: ದಿನಾಂಕ: 18-04-2024(ಹಾಯ್ ಉಡುಪಿ ನ್ಯೂಸ್)   ಮಣಿಪಾಲ ಮೂಲದ ಚಿನ್ನದ ಸಾಲ ನೀಡುವ ಹಣಕಾಸು ಸಂಸ್ಥೆಗೆ ಅದರ ನೌಕರರು ಮೋಸ ಮಾಡಿ 80 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಸಂಸ್ಥೆ ಯ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಣಿಪಾಲ ನಿವಾಸಿ ಅಂಕುರ್ ಮಾಥುರ್ (39) ಎಂಬವರು ಸಹಿಬಂದು ಫಿನ್ ಟೆಕ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಮಣಿಪಾಲ ಎಂಬ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಆಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 10/02/2022 ರಂದು ಸಹಿಬಂಧು ಫಿನೈಕ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ನ ಅಂಗ ಸಂಸ್ಥೆಯಾಗಿ ನೋಂದಣಿಯಾಗಿದ್ದು, ಆ ನಂತರ ತನ್ನ ಕಾರ್ಪೋರೇಟ್ ಕಛೇರಿಯನ್ನು ಒನ್ ಬೈಬಾನಿ, 305, 3 ನೇ ಮಹಡಿ, ಗಾಲ್ಫ್ ಕೋರ್ಸ್ ರಸ್ತೆ, ಸೆಕ್ಟರ್56, ಗುರುಗ್ರಾಮ್, ಹರಿಯಾಣ ರಾಜ್ಯ ದಲ್ಲಿ ಸಬ್ ಬ್ರಾಂಚ್ ತೆರೆದಿರುತ್ತಾರೆ ಎನ್ನಲಾಗಿದೆ.

ಸಹಿ ಬಂಧು ಸಂಸ್ಥೆಯು ಭಾರತದ ಪ್ರಮುಖ ಚಿನ್ನದ ಸಾಲ ಅಗ್ರೀಗೇಟರ್ ವೇದಿಕೆಯಾಗಿ, ಭಾರತದಲ್ಲಿನ ತಮ್ಮ ಪಾಲುದಾರ ಬ್ಯಾಂಕ್ ಗಳ ಸಹಯೋಗದೊಂದಿಗೆ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ತ್ವರಿತ ಮತ್ತು ಸುರಕ್ಷಿತ ಚಿನ್ನದ ಸಾಲಗಳನ್ನು ಪಡೆಯಲು ಸಹಕರಿಸುತ್ತಿರುವುದಾಗಿ ಹೇಳಿಕೊಂಡಿದೆ .ಅಲ್ಲದೆ ಸಹಿಬಂಧು ಸಂಸ್ಥೆಯು ಮತ್ತೊಂದು ಸಂಸ್ಥೆ ಯಾದ ಮೆಸರ್ಸ್ ಸಿಂಪಲ್ಪೇ ಫೈನಾನ್ ಪ್ರೈವೇಟ್ ಲಿಮಿಟೆಡ್ ನ ಸಹಭಾಗಿತ್ವ ಹೊಂದಿಕೊಂಡು ತಮ್ಮ ನಿಕಟ ಸಮನ್ವಯದೊಂದಿಗೆ ಆರ್ಥಿಕ ವಹಿವಾಟುಗಳ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದು, ಭಾರತ ದೇಶಾದ್ಯಂತ ವಿವಿಧ ಗ್ರಾಹಕರಿಗೆ ಯಾವುದೇ ಭದ್ರತೆಗಳನ್ನು ಅಥವಾ ಅಡಮಾನ ಪತ್ರಗಳನ್ನು ಪಡೆದುಕೊಳ್ಳದೆ (ಅಸುರಕ್ಷಿತ ಸಾಲ) ಸಾಲ ಹಾಗೂ ಇನ್ನಿತರ ಪರಿಹಾರಗಳನ್ನು ಒದಗಿಸುವುದು ಹಾಗೂ ಈ ಸಂಸ್ಥೆ ಯಲ್ಲಿ ಆಸಕ್ತ ಹಾಗೂ ಅಗತ್ಯವಿರುವ ಗ್ರಾಹಕರಿಗೆ ಚಿನ್ನದ ಸಾಲ ಗಳನ್ನು ಒದಗಿಸುವ ಮತ್ತು ಪ್ರಕ್ರಿಯೆಗೊಳಿಸಲು ಕಂಪೆನಿಯು ದೇಶಿಯವಾಗಿ ವಿನ್ಯಾಸಗೊಳಿಸಿ ಅಭಿವೃದ್ದಿಪಡಿಸಿದ ಮೊಬೈಲ್ ಆಪ್ಲಿಕೇಶನ್ ಮುಖಾಂತರ ಸಹಿಬಂಧುವಿನ ಉದ್ಯೋಗಿಗಳು/ ಏಜೆಂಟರುಗಳು ಅಗತ್ಯವಿರುವ ಕಡತಗಳನ್ನು  ಮೊಬೈಲ್ ಆಪ್ಲಿಕೇಶನ್ ಮುಖಾಂತರ ಆನ್ ಲೈನ್ ನಲ್ಲಿ ಸಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳ ಅನುಮೋಧನೆ ಪಡೆದುಕೊಂಡು ಸಾಲ ಹಾಗೂ ಇನ್ನಿತರ ಆರ್ಥಿಕ ವಹಿವಾಟುಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಹಿಬಂದು ಫಿನ್ ಟೆಕ್  ಕಂಪೆನಿಯಲ್ಲಿ ವಿವಿಧ ಹುದ್ದೆಗಳ ನೌಕರರಾಗಿರುವ 1.ಪಲ್ವಿಂದರ್ ಸಿಂಗ್, ಪಠಾಣ್ಕೋಟ್, ಪಂಜಾಬ್, 2. ಅನಿಲ್ ಕುಮಾರ್ ಶರ್ಮಾ, ಪಾಂಡೆಪುರ್, ವಾರಣಾಸಿ-221002, 3. ದಿವಾಕರ್ ಮಿಶ್ರಾ, ಬಿಸಾಲ್ಪುರ್, ಮಧೈ ಯಾ ಉರ್ಫ್ ರಾಮ್ಶಾಲಾ, ಪಿಲಿಭಿತ್, ಉತ್ತರಪ್ರದೇಶ, 4.ಗೌರವ್ ಕನೌಜಿಯಾ ಬರೇಲಿ, ಉತ್ತರಪ್ರದೇಶ, 5. ಗುರ್ಜೀತ್ ಸಿಂಗ್ ಉಧಮ್ ಸಿಂಗ್ ನಗರ, ಉತ್ತರಾಖಂಡ 6.ಕೌಶಲ್ ಕುಮಾರ್ ಬರೇಲಿ, ಉತ್ತರಪ್ರದೇಶ, 7.ಲವ್ ಯದುವಂಶಿ ಬರೇಲಿ, ಉತ್ತರಪ್ರದೇಶ, 8. ರಂಜೀತ್ ಸಿಂಗ್ ಬರೇಲಿ, ಉತ್ತರಪ್ರದೇಶ ಮತ್ತು ಇತರರು ಆರೋಪಿಗಳು ಕಂಪೆನಿಗೆ ಮೋಸ ಮಾಡುವ ದುರುದ್ದೇಶದಿಂದ ಒಳಸಂಚು ನಡೆಸಿ ದೇಶಾದ್ಯಂತ ಕಂಪೆನಿ ಯಲ್ಲಿ ಕೆಲಸ ಮಾಡುವ ಹಲವಾರು ಮಾರಾಟಗಾರರು/ ಏಜೆಂಟ ರೊಂದಿಗೆ ಸೇರಿಕೊಂಡು, ಸಂಸ್ಥೆಗೆ ಸಂಬಂಧಿಸಿದ ಹಣಕಾಸಿನ ಕಡತ ಗಳನ್ನು ಫೋರ್ಜರಿ ಮಾಡಿ, ಸಾಕ್ಷಿ ನಾಶ, ಅಮೂಲ್ಯವಾದ ಭದ್ರತೆಯ ನಕಲು, ಏಜೆಂಟರಿಂದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ, ದುರುಪಯೋಗ, ತಪ್ಪು ನಿರೂಪಣೆ, ಕ್ರಿಮಿನಲ್ ಪಿತೂರಿ, ಸಂಸ್ಥೆಯ ನಿಧಿಗಳ ದುರುಪಯೋಗ ಮತ್ತು ಮೇಲಿನ ವ್ಯವಹಾರ ಕಾರ್ಯಾಚರಣೆ ಗಳಿಗೆ ಸಂಬಂಧಿಸಿದ ಇತರ ಸಂಬಂಧಿತ ಅಪರಾಧಗಳನ್ನು ರೂಪಿಸಿ ದೂರು ದಾರ ಸಂಸ್ಥೆಗಳಿಗೆ ಆರೋಪಿಗಳು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ಮೋಸ ಮಾಡಿ, ಕಡತಗಳನ್ನು ಸುಟ್ಟು ಹಾಕಿ ಸಾಕ್ಷಿ ನಾಶಪಡಿಸಿ, ಸಾರ್ವಜನಿಕರಿಗೆ ಸುಳ್ಳು ಭರವಸೆ ನೀಡಿ ನವೆಂಬರ್ 2023 ರಿಂದ ಜನವರಿ 2024 ರ ಮಧ್ಯಾವಧಿಯಲ್ಲಿ ಸಂಸ್ಥೆಗೆ ಸಂದಾಯವಾಗ ಬೇಕಾದ ರೂ.79.54 ಲಕ್ಷ ಹಣವನ್ನು ಆರೋಪಿಗಳು ಲಪಾಟಾಯಿಸಿ ತಮ್ಮ ವೈಯಕ್ತಿಕ ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು, ಅಧಿಕಾರ ದುರುಪಯೋಗಪಡಿಸಿ ಕೊಂಡು ಕಂಪೆನಿಗೆ ಹಾಗೂ ಸಾರ್ವಜನಿಕರಿಗೆ ನಂಬಿಕೆ ದ್ರೋಹ ಮತ್ತು ವಂಚನೆ ನಷ್ಟ ಉಂಟು ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಕಲಂ: 120 (ಬಿ), 201, 406, 409, 465, 467, 468, 420, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!