ಉಡುಪಿ: ದಿನಾಂಕ:17-04-2024(ಹಾಯ್ ಉಡುಪಿ ನ್ಯೂಸ್) ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವಿಷಯದಲ್ಲಿ ರಿಕ್ಷಾ ಚಾಲಕರು ಹೊಡೆದಿದ್ದಾರೆಂದು ರಿಕ್ಷಾ ಚಾಲಕರೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಉಡುಪಿ ,ಗುಂಡಿಬೈಲು ನಿವಾಸಿ ಚನ್ನಕೇಶವ ಎಂಬವರು ಆಟೋ ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದು , ದಿನಾಂಕ 15/04/2024 ರಂದು ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಸಿಟಿ ಆಟೋ ನಿಲ್ದಾಣದಲ್ಲಿ KA-20-AB-8368 ನೇ ನಂಬ್ರದ ಆಟೋರಿಕ್ಷಾವನ್ನು ನಿಲ್ದಾಣದಲ್ಲಿ ಬಾಡಿಗೆ ಮಾಡಲು ನಿಲ್ಲಿಸಿದ್ದು ಆವಾಗ ಆರೋಪಿ ಮುಖೇಶ ಎಂಬಾತ ಚನ್ನಕೇಶವರ ಬಳಿ ಬಂದು ಅಡ್ಡಗಟ್ಟಿ ಅವಾಚ್ಯವಾಗಿ ಬೈದಿದ್ದು, ಇನ್ನೊಬ್ಬ ಆರೋಪಿ ಉದಯ ಎಂಬಾತ ಚನ್ನಕೇಶವರ ಅಟೋ ರಿಕ್ಷಾವನ್ನು ಹಿಂದೆ-ಮುಂದೆ ತಳ್ಳಿ ಕೈಯಿಂದ ಮುಖಕ್ಕೆ ಎದೆಗೆ ಹೊಡೆದಿದ್ದು, ಇನ್ನೊಬ್ಬ ಆರೋಪಿ ನವಾಜ್ ಎಂಬವ ಕಾಲಿನಿಂದ ಒದ್ದಿರುವುದಾಗಿ ಚೆನ್ನಕೇಶವ ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 74/2024 ಕಲಂ: 341, 323, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
- ಈ ಪ್ರಕರಣದಲ್ಲಿ ರಿಕ್ಷಾ ಚಾಲಕ ರಮೇಶ್ (34) ಎಂಬವರಿಗೆ ಚನ್ನಕೇಶವ ಎಂಬವರು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.