ಕಾರ್ಕಳ: ದಿನಾಂಕ:12-04-2024( ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ಕಾಬೆಟ್ಟು ವಿನಲ್ಲಿ ಅಳವಡಿಸಲಾದ ಟವರ್ ನ ಬಿಡಿ ಭಾಗಗಳನ್ನು ಕಳ್ಳತನ ನಡೆಸಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಟ ,ಗಿಳಿಯಾರು ನಿವಾಸಿ ಯೋಗೀಶ ಪಿ (41) ಅವರು Tower Vision ಕಂಪೆನಿಯಲ್ಲಿ ಕ್ಲಸ್ಟರ್ ಇನ್ಚಾರ್ಜ್ ಕರ್ತವ್ಯ ಮಾಡಿಕೊಂಡಿದ್ದು ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಾಬೆಟ್ಟು ಶೀತಲ್ ಬಾರ್ ಹಿಂಭಾಗದಲ್ಲಿ ಟವರ್ ವಿಷನ್ ಕಂಪೆನಿಯಿಂದ ಫೆಬ್ರವರಿ ತಿಂಗಳಿನಲ್ಲಿ ಟವರನ್ನು ನಿರ್ಮಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಟವರ್ನಲ್ಲಿ ನೆಟ್ವರ್ಕ್ ಸ್ಥಗಿತವಾಗಿರುವುದರಿಂದ ದಿನಾಂಕ 11-04-2024 ರಂದು ಪರಿಶೀಲಿಸಿದಾಗ ಟವರ್ನಲ್ಲಿ ಅಳವಡಿಸಿದ್ದ ಏರ್ಟೆಲ್ ಕಂಪೆನಿ ಮಾಲಿಕತ್ವದ ಎರಿಕ್ಸನ್ ಕಂಪೆನಿಯ ಬಿಡಿ ಭಾಗವಾದ BBU ವನ್ನು ದಿನಾಂಕ 09-04-2024 ರಂದು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳವಾದ ಸೊತ್ತಿನ ಮೌಲ್ಯ ರೂ 1,83,600/ ಆಗಬಹುದು ಎನ್ನಲಾಗಿದೆ .ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.