Spread the love

ಶಿರ್ವಾ: ದಿನಾಂಕ : 10/04/2024 (ಹಾಯ್ ಉಡುಪಿ ನ್ಯೂಸ್) ಕುಂಜಾರು ಗಿರಿ ಬಳಿಯ ಬಾಣತೀರ್ಥ ಕ್ರಾಸ್ ನಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಯುವಕನನ್ನು ಶಿರ್ವಾ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ ಅವರು ಬಂಧಿಸಿದ್ದಾರೆ.

ಶಿರ್ವಾ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ ಅವರು ದಿನಾಂಕ: 09-04-2024 ರಂದು ಶಂಕರಪುರದಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ KA-20-ER-7629 ನೇ ನೊಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಕುರ್ಕಾಲು ಕುಂಜಾರುಗಿರಿ ಬಳಿಯ ಬಾಣತೀರ್ಥ ಕ್ರಾಸ್‌ಬಳಿ ಒಬ್ಬ ವ್ಯಕ್ತಿ ಗಾಂಜಾವನ್ನು ತನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾನೆ ಎಂಬುದಾಗಿ ಬಂದ ಗುಪ್ತ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ತೆರಳಿ  ಆತನ ಬಳಿಗೆ ಹೋದಾಗ ಆತನು ಸ್ಕೂಟರ್‌ ಅನ್ನು ಸ್ಥಳದಲ್ಲಿಯೇ ಬಿಟ್ಟು ಬಾಣತೀರ್ಥ ಕಡೆಗೆ ಓಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಿದಾಗ ರೇವುನಾಥ ಯಾನೆ ಪ್ರೇಮನಾಥ ಯಾನೆ ರೇವ್‌ (23), ಸುಭಾಷ್‌ನಗರ,ಕಾಪು ಎಂದು ತಿಳಿಸಿದ್ದು, ಆತನನ್ನು ಶೋಧನೆ ನಡೆಸಿದಾಗ ಆತನ ಜೀನ್ಸ್‌ಪ್ಯಾಂಟ್‌ನ ಬಲ ಕಿಸೆಯ ಒಳಗಡೆ ನಾಲ್ಕು ಸಣ್ಣ ಪ್ಲಾಸ್ಟಿಕ್‌ ಕವರ್‌ ಒಳಗಡೆ ಗಾಂಜಾ ಸೊಪ್ಪು, ಕಾಂಡ, ಬೀಜ ಇದ್ದು ಗಾಂಜಾದಂತಹ ವಾಸನೆ ಬಂದಿರುತ್ತದೆ ಎನ್ನಲಾಗಿದೆ.

ಅವುಗಳನ್ನು ಡಿಜಿಟಲ್ ತೂಕದ ಯಂತ್ರದ ಮೇಲೆ ಇಟ್ಟು ತೂಕಮಾಡಿ ನೋಡಿದಾಗ ಸಣ್ಣ ಪ್ಲಾಸ್ಟಿಕ್‌ ಕವರ್‌ ಒಳಗಡೆ ತಲಾ 6 ಗ್ರಾಂ ನಂತೆ 4 ಪ್ಯಾಕೆಟ್‌ನಲ್ಲಿ ಪ್ಯಾಕ್‌ ಮಾಡಿರುವುದು ಕಂಡು ಬಂದಿದ್ದು ಇದರ ಮೌಲ್ಯ 1200/- ಆಗಿರುತ್ತದೆ ಎನ್ನಲಾಗಿದೆ.

ಬಳಿಕ ಆತನ ಕಿಸೆಯಲ್ಲಿ ನಗದು ಹಣ ಇದ್ದು, ಅದನ್ನು ಪರಿಶೀಲಿಸಿದಾಗ 500 ಮುಖಬೆಲೆಯ 3 ನೋಟ್‌ ಇದ್ದು, ನಂತರ ಆತನ ಕಿಸೆಯಲ್ಲಿ ಮೊಬೈಲ್‌ ಇದ್ದು ಪರಿಶೀಲಿಸಿದಾಗ Nokia ಕಂಪೆನಿಯ ಕಪ್ಪು ಬಣ್ಣದ ಕೀ ಪ್ಯಾಡ್‌ ಮೊಬೈಲ್‌ ಆಗಿದ್ದು  ,ಆತನ ಕೈಯಲ್ಲಿದ್ದ ಬ್ಯಾಗ್‌ ಅನ್ನು ಪರಿಶೀಲಿಸಿದಾಗ ಬ್ಯಾಗ್‌ನ ಒಳಗಡೆ ಪ್ಲಾಸ್ಟಿಕ್‌ಚೀಲದ ಒಳಗಡೆ ಗಾಂಜಾ ಸೊಪ್ಪು, ಕಾಂಡ, ಬೀಜ ಇದ್ದು ಗಾಂಜಾದಂತಹ ವಾಸನೆ ಬಂದಿರುತ್ತದೆ ಎಂದಿದ್ದಾರೆ. ಇದರ ಮೌಲ್ಯ 8000/- ಆಗಬಹುದು ಇದನ್ನು ಡಿಜಿಟಲ್ ತೂಕದ ಯಂತ್ರದ ಮೇಲೆ ಇಟ್ಟು ತೂಕಮಾಡಿ ನೋಡಿದಾಗ 216 ಗ್ರಾಂ ತೂಕ ಇರುವುದು ಕಂಡು ಬಂತು ಎಂದಿದ್ದಾರೆ.

ಆತನ ಪ್ಲಾಸ್ಟಿಕ್‌ ಬ್ಯಾಗ್‌ನ ಒಳಗಡೆ ಸಿಲ್ವರ್‌ಬಣ್ಣದಿಂದ ಕೂಡಿದ ಅದರ ಹಿಂದುಗಡೆ 200g/0.01g QC.PASS. ಎಂದು ಇಂಗ್ಲೀಷ್‌ ಅಕ್ಷರದಲ್ಲಿ ಹೆಸರು ನಮೂದು ಇರುವ ಎಲೆಕ್ಟ್ರಾನಿಕ್‌ ತೂಕದ ಸಾಧನ-1 ಇದ್ದು, ಇದರ ಅಂದಾಜು ಮೌಲ್ಯ 500/- ಆಗಬಹುದು ಎನ್ನಲಾಗಿದೆ . ಬ್ಯಾಗ್‌ನ ಒಳಗಡೆ ಖಾಲಿ ಪ್ಲಾಸ್ಟಿಕ್‌ ಕವರ್‌-10 ಇದ್ದು, ಬ್ಯಾಗ್‌ನ ಒಳಗಡೆ Kangaro ಎಂದು ಹೆಸರು ನಮೂದು ಇರುವ ನೀಲಿ ಬಣ್ಣದ ಸ್ಟೆಪ್ಲರ್‌ ಹಾಗೂ  ಆತನ ವಶದಲ್ಲಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಕೆಂಪು ಮತ್ತು ನೀಲಿ ಬಣ್ಣದಿಂದ ಕೂಡಿದ Skysack ಎಂದು ಹೆಸರು ನಮೂದು ಇರುವ ಬ್ಯಾಗ್‌ ಆಗಿರುತ್ತದೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ಸ್ಕೂಟರ್‌ನ ಬಗ್ಗೆ ವಿಚಾರಿಸಿದಾಗ ಸ್ಕೂಟರ್‌ ಅನ್ನು ಈ ಸ್ಥಳಕ್ಕೆ ತಾನೆ ಸವಾರಿ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದು, ಬಳಿಕ ಆತನು ಸ್ಕೂಟರಿನ ಕೀಯಿಂದ ಡಿಕ್ಕಿಯನ್ನು ತೆರೆದು ತೋರಿಸಿದ್ದು, ಅದರಲ್ಲಿ ನೋಡಿದಾಗ  ಪ್ಲಾಸ್ಟಿಕ್‌ ಮತ್ತು ಹಿಂದಿ ವಾರ್ತಾ ಪತ್ರಿಕೆಯಲ್ಲಿ ಸುತ್ತಿ ಪ್ಯಾಕ್‌ ಮಾಡಿ ಇಟ್ಟಿದ್ದು, ಅವುಗಳನ್ನು ಪರಿಶೀಲಿಸಿದಾಗ ಪ್ಲಾಸ್ಟಿಕ್‌ ಕವರ್‌ನ ಒಳಗಡೆ ಗಾಂಜಾ ಸೊಪ್ಪು, ಕಾಂಡ, ಬೀಜ ಇದ್ದು ಗಾಂಜಾದಂತಹ ವಾಸನೆ ಬಂದಿರುತ್ತದೆ ಎಂದಿದ್ದಾರೆ. ಇದನ್ನು ಡಿಜಿಟಲ್ ತೂಕದ ಯಂತ್ರದ ಮೇಲೆ ಇಟ್ಟು ತೂಕಮಾಡಿ ನೋಡಿದಾಗ 990 ಗ್ರಾಂ ತೂಕ ಇರುವುದು ಕಂಡು ಬಂದಿದ್ದು ಇದರ ಮೌಲ್ಯ 40,000/- ಆಗಬಹುದು . ಸ್ಕೂಟರ್‌ ಅನ್ನು  ಪರಿಶೀಲಿಸಿದಾಗ KA-20-ER-7629 ಎಂದು ನೋಂದಣಿ ಸಂಖ್ಯೆ ಬರೆದಿರುತ್ತದೆ ಅದರ ಮೌಲ್ಯ 20,000/- ಆಗಿರುತ್ತದೆ ಎನ್ನಲಾಗಿದೆ .

ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ  ಕಲಂ: 8(c) ,20(b)(ii)(B)NDPS ರಂತೆ ಪ್ರಕರಣ ದಾಖಲಾಗಿದೆ.

error: No Copying!