ಶಿರ್ವಾ: ದಿನಾಂಕ :04-04-2024 (ಹಾಯ್ ಉಡುಪಿ ನ್ಯೂಸ್) ಸುಭಾಷ್ ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ ಅವರು ಬಂಧಿಸಿದ್ದಾರೆ.
ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ ಅವರಿಗೆ ದಿನಾಂಕ:24-03-2024ರಂದು ಬೆಳಿಗ್ಗೆ ಸುಭಾಷ಼್ ನಗರದಲ್ಲಿ ಓರ್ವ ಯುವಕ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿ ಕಾಪು ತಾಲೂಕು ಕುರ್ಕಾಲು ಗ್ರಾಮದ ಸುಭಾಷ್‌ನಗರ ಬಸ್ಸು ನಿಲ್ದಾಣದ ಬಳಿ ಆಪಾದಿತ ಜೋನ್ ನೊರೋಹ್ನ (30) ಎಂಬಾತ ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದ ಜೋನ್ ನೊರೋಹ್ನ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಆಪಾದಿತ ಜೋನ್ ನೊರೋಹ್ನ ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ದಿನಾಂಕ 02/04/2024 ರಂದು ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿದೆ.