ಉಡುಪಿ: ದಿನಾಂಕ: 26/03/2024 (ಹಾಯ್ ಉಡುಪಿ ನ್ಯೂಸ್) ಕೆಳಾರ್ಕಳಬೆಟ್ಟುವಿನ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರು ಬಂಧಿಸಿದ್ದಾರೆ.
ಸೆನ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರಿಗೆ ದಿನಾಂಕ:25-03-2024 ರಂದು ಕೆಳಾರ್ಕಳಬೆಟ್ಟು ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ KA-20-EY-2988 ನೇ ಹೋಂಡಾ ಶೈನ್ ಮೋಟಾರು ಸೈಕಲಿನಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಬಿಳಿ ಬಣ್ಣದ ಪಾಲಿಥಿನ್ ಚೀಲದಲ್ಲಿ ಮಾರಾಟ ಮಾಡಲು ನಿಂತಿರುವ ಬಗ್ಗೆ ದೊರೆತ ಗುಪ್ತ ಮಾಹಿತಿ ಮೇರೆಗೆ ಕೂಡಲೇ ಆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .
ಅಲ್ಲಿ ಮೋಟಾರ್ ಸೈಕಲ್ ನಲ್ಲಿ ಕಾಯುತ್ತಿದ್ದ ಸುಕೇಶ್(26) ಎಂಬಾತನನ್ನು ಬಂಧಿಸಿ ಆತನಿಂದ ಮಾರಾಟ ಮಾಡಲು ಹೊಂದಿದ್ದ 1 ಕಿಲೋ 102 ಗ್ರಾಂ ತೂಕದ ಗಾಂಜಾ, ಅಂದಾಜು ಮೌಲ್ಯ ರೂಪಾಯಿ 44,000/-, ಗಿರಾಕಿ ಕುದುರಿಸಲು ಬಳಸಿದ್ದ ಮೊಬೈಲ್ ಪೋನ್, ಪಾಲಿಥಿನ್ ಕೈಚೀಲ ಮತ್ತು ಗಾಂಜಾ ಸಾಗಾಟಕ್ಕೆ ಬಳಸಿರುವ KA-20-EY-2988 ನೇ ಹೋಂಡಾ ಶೈನ್ ಮೋಟಾರು ಸೈಕಲ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 8(c), 20 (b) (ii), (B) ಎನ್.ಡಿ.ಪಿ.ಎಸ್. ಕಾಯ್ದೆ 1985 ರಂತೆ ಪ್ರಕರಣ ದಾಖಲಾಗಿದೆ.