ಹಿರಿಯಡ್ಕ: ದಿನಾಂಕ 27/03/2024 (ಹಾಯ್ ಉಡುಪಿ ನ್ಯೂಸ್) ಆತ್ರಾಡಿಯಿಂದ ಹಿರಿಯಡ್ಕ ಕಡೆಗೆ ಅಕ್ರಮವಾಗಿ ಶೇಂದಿ ಸಾಗಾಟ ಮಾಡುತ್ತಿದ್ದ ಕಾರನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರು ದಿನಾಂಕ :25-03-2024ರಂದು ಠಾಣಾ ಸಿಬ್ಬಂದಿ ಉಮೇಶ್ ಹಾಗೂ ಲೋಕಸಭಾ ಚುನಾವಣೆ ಪ್ರಯುಕ್ತ ಎಫ್ ಎಸ್ ಟಿ ಅಧಿಕಾರಿ ಭಾನುಪ್ರಕಾಶ್ ಅತ್ತಾವರ ರವರೊಂದಿಗೆ ಮಣಿಪಾಲ ಠಾಣಾ ಸಿಬ್ಬಂದಿ ಮನೋಜ್ ರವರೊಂದಿಗೆ ಠಾಣೆಯ ಎದುರು ಅಂಜಾರು ರಿಂಗ್ ರೋಡ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಆತ್ರಾಡಿ ಕಡೆಯಿಂದ ಬಂದ ಕೆಎ 19 ಎಂಸಿ 4585 ನೇ ಮಾರುತಿ ಓಮ್ನಿ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನ ಹಿಂಭಾಗ ಸೀಟ್ ತೆಗೆದು ಬಿಳಿ ಬಣ್ಣದ ಕ್ಯಾನ್ ಗಳಲ್ಲಿ ಶೇಂದಿ ತುಂಬಿಸಿಟ್ಟಿರುವುದು ಕಂಡುಬಂದಿದ್ದು, ಕಾರಿನ ಚಾಲಕನಲ್ಲಿ ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸಾಗಾಟದ ಪರವಾನಗಿ ಇಲ್ಲದೇ ಇದ್ದು ಅಂಗಡಿಗಳಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಅಂದಾಜು 7500/- ಮೌಲ್ಯದ 7 ಕ್ಯಾನ್ ಗಳಲ್ಲಿದ್ದ ಸುಮಾರು 100 ಲೀಟರ್ ನಷ್ಟು ಶೇಂದಿ ಹಾಗೂ ಸಾಗಾಟಕ್ಕೆ ಬಳಸಿದ 100000/- ಲಕ್ಷ ಮೌಲ್ಯದ ಮಾರುತಿ ಓಮ್ನಿ ಕಾರನ್ನು ಪೊಲೀಸರು ಸ್ವಾಧೀನಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಅನೀಶ್ (21) ಕೊಡವೂರು ಉಡುಪಿ ಎಂಬಾತನ ವಿರುದ್ದ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ : 11,14,15,32,38(A) KE Act ನಂತೆ ಪ್ರಕರಣ ದಾಖಲಾಗಿದೆ.