ಹೆಬ್ರಿ: ದಿನಾಂಕ:24-03-2024(ಹಾಯ್ ಉಡುಪಿ ನ್ಯೂಸ್) ಸೀತಾ ನದಿಯಿಂದ ಮರಳು ಕಳ್ಳತನ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಗರಾಜ ಎಂಬವನನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಕುಚ್ಚೂರು ಗ್ರಾಮದ ಸೀತಾನದಿ ಹೊಳೆಯಿಂದ ದಿನಾಂಕ : 23-03-2024 ರಂದು ನಾಗರಾಜ ಎಂಬವನು ಮರಳನ್ನು ಕಳವು ಮಾಡಿ ಯಾವುದೇ ಪರವಾನಿಗೆಯನ್ನು ಪಡೆಯದೆ ಲಾಭದ ಉದ್ದೇಶದಿಂದ ಅಕ್ರಮವಾಗಿ ಕೆಎಲ್-27-ಎ-9414 ನೇ 407 ಲಾರಿಯಲ್ಲಿ ತುಂಬಿಸಿ ಸಾಗಾಟಮಾಡುತ್ತಿದ್ದವನನ್ನು ಹೆಬ್ರಿ ಪೊಲೀಸರು ಬಂಧಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆಯಲ್ಲಿ ಕಲಂ 379 IPC & 4( 1A) ,21(4) MMRD act ಯಂತೆ ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.