ಮಲ್ಪೆ: ದಿನಾಂಕ: 17/03/2024 (ಹಾಯ್ ಉಡುಪಿ ನ್ಯೂಸ್) ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಷ್ಮಾ ಜಿ ಸಿ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸುಷ್ಮಾ ಜಿ ಬಿ ಅವರಿಗೆ ದಿನಾಂಕ :17-03-2024ರಂದು 2 ಜನ ಸೇರಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲು ಕಾಯುತ್ತಿರುವುದಾಗಿ ಬಂದ ಗುಪ್ತ ಮಾಹಿತಿಯ ಮೇರೆಗೆ ಕೂಡಲೇ ತೆರಳಿ ಸಿಬ್ಬಂದಿಯವರ ಸಹಾಯದಿಂದ ಇಬ್ಬರು ವ್ಯಕ್ತಿಗಳನ್ನು ಹಿಡಿದು ಹೆಸರು ವಿಳಾಸದ ಬಗ್ಗೆ ವಿಚಾರಿಸಿದಾಗ ಒಬ್ಬಾತನು ತನ್ನ ಹೆಸರು ನಿಹಾಲ್(24) ,ಇನ್ನೊಬ್ಬನು ತನ್ನ ಹೆಸರು ತಿಲಕ್ ರಾಜ್(30) ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಆ ಪೈಕಿ ನಿಹಾಲ್ ಕೈಯಲ್ಲಿದ್ದ ಬಟ್ಟೆಯ ಚೀಲದಲ್ಲಿ ಏನಿದೆ ಎಂದು ಪೊಲೀಸರು ವಿಚಾರಿಸಿದಾಗ ಗಾಂಜಾ ಎಂದು ತಿಳಿಸಿದ್ದು. ನಿಹಾಲ್ ನ ಅಂಗಶೋಧನೆ ಮಾಡಿದಾಗ ಆತನ ಕೈಯಲ್ಲಿ ಇದ್ದ ಬಟ್ಟೆಯ ಚೀಲದ ಒಳಗೆ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಗಾಂಜಾ , ಒಣಗಿದ ಎಲೆ, ಬೀಜ , ಮೊಗ್ಗು ಗಂಟುಗಳಿರುವುದು ಕಂಡು ಬಂದಿದ್ದು ಪೊಲೀಸರು ಇಬ್ಬರನ್ನೂ ಬಂಧಿಸಿ,ಗಾಂಜಾವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 20(b)(ii) A , 8c ndps act ರಂತೆ ಪ್ರಕರಣ ದಾಖಲಾಗಿದೆ.