ಹೆಬ್ರಿ: ದಿನಾಂಕ:16-03-2024(ಹಾಯ್ ಉಡುಪಿ ನ್ಯೂಸ್) ಗಂಡನ ಪರಿಚಯದವನೆಂದು ನಂಬಿಸಿ ಮಹಿಳೆಯೋರ್ವರಿಗೆ ಐವತ್ತು ಸಾವಿರ ರೂಪಾಯಿ ಗಳನ್ನು ವಂಚಿಸಲಾಗಿದೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹೆಬ್ರಿ ತಾಲೂಕು ,ಕುಚ್ಚೂರು ಗ್ರಾಮದ ನಿವಾಸಿ ಸುಶೀಲ (45) ಎಂಬವರಿಗೆ ದಿನಾಂಕ: 02/03/2024 ರಂದು ಅನಿಲ್ ಶರ್ಮಾ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯು ಸುಶೀಲರವರ ಮೊಬೈಲ್ ಗೆ ಕರೆ ಮಾಡಿ ತಾನು ಸುಶೀಲರವರ ಗಂಡನ ಪರಿಚಯದವನಾಗಿ ತಿಳಿಸಿ ಅವರಿಂದ ತಾನು 12,000/ ರೂ ಸಾಲ ಪಡೆದಿದ್ದು ಸುಶೀಲ ರವರ ಗೂಗಲ್ ಪೇಗೆ 30,000/ ರೂಪಾಯಿ ಹಣವನ್ನು ಹಾಕುವುದಾಗಿಯೂ ಅದರಲ್ಲಿ 18,000/ ರೂಪಾಯಿಯನ್ನು ವಾಪಾಸು ತನಗೆ ಗೂಗಲ್ ಪೇ ಮಾಡುವಂತೆ ತಿಳಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಾಕಿ ಉಳಿದ 12,000/- ರೂಪಾಯಿ ಹಣವನ್ನು ಸುಶೀಲರವರು ಇಟ್ಟುಕೊಳ್ಳುವಂತೆ ತಿಳಿಸಿ ಸುಶೀಲರವರಿಗೆ ನಂಬಿಕೆ ಬರುವಂತೆ ವರ್ತಿಸಿ ಮೋಸದಿಂದ ಅಪರಿಚಿತ ವ್ಯಕ್ತಿಯು ಸುಶೀಲ ರವರಿಂದ 50,000/- ರೂಪಾಯಿ ಹಣವನ್ನು ಬೇರೆ ಬೇರೆ ಗೂಗಲ್ ಪೇ ನಂಬರುಗಳಿಗೆ ಗೂಗಲ್ ಪೇ ಮಾಡಿಸಿಕೊಂಡಿರುತ್ತಾರೆ ಎಂದು ಸುಶೀಲ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ US 66(C), 66(D) IT ACT ನಂತೆ ಪ್ರಕರಣ ದಾಖಲಾಗಿದೆ.