ಮುಂಬೈ: ದಿನಾಂಕ:10-03-2024(ಹಾಯ್ ಉಡುಪಿ ನ್ಯೂಸ್)
28 ವರ್ಷ ಗಳ ಬಳಿಕ ಭಾರತದಲ್ಲಿ ಆಯೋಜಿಸಲಾದ “ವಿಶ್ವ ಸುಂದರಿ” ಸೌಂದರ್ಯ ಸ್ಪರ್ಧೆ ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರಿನಲ್ಲಿ ನಡೆಯಿತು.
ವಿಶ್ವ ಸುಂದರಿಯಾಗಿ ಚೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ
“ವಿಶ್ವ ಸುಂದರಿ” ಕಿರೀಟ ಗೆದ್ದಿದ್ದಾರೆ.
ಭಾರತವನ್ನು ಪ್ರತಿನಿಧಿಸಿದ್ದ ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ 22ರ ಹರೆಯದ ಚೆಲುವೆ ಸಿನಿ ಶೆಟ್ಟಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸ್ಪರ್ಧೆ ಯಲ್ಲಿ ಅಗ್ರ 8 ರ ಸುತ್ತಿಗೆ ಪ್ರವೇಶಿಸಿದ್ದರು.
ಮುಂಬೈ ಯಲ್ಲಿಯೇ ಹುಟ್ಟಿ ಬೆಳೆದ ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಚೆಲುವೆ ಸಿನಿ ಶೆಟ್ಟಿ ವಿಶ್ವ ಸುಂದರಿ ಸ್ಪರ್ಧೆ ಯಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.