Spread the love

ಮಣಿಪಾಲ: ದಿನಾಂಕ: 02/03/2024 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ಎಂ.ಜಿ.ಎಮ್ ಕಾಲೇಜಿನ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ 15 ಜನರನ್ನು ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ ಸಿ ಅವರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ ಅವರಿಗೆ ದಿನಾಂಕ:01-03-2024ರಂದು ಶಿವಳ್ಳಿ ಗ್ರಾಮದ ಎಂ ಜಿ ಎಂ ಕಾಲೇಜಿನ ಹಿಂಭಾಗದ ಮೈದಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕವನ್ನು ನಡೆಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ಕೂಡಲೇ ದಾಳಿ ಮಾಡಿ ಅಲ್ಲಿ ಕೋಳಿ ಅಂಕ ನಡೆಸುತ್ತಿದ್ದ 1)ಕಿಶೋರ್‌, 2)ಅಶೋಕ , 3)ಸದಾನಂದ , 4)ಧನರಾಜ್‌, 5)ಸಂದೀಪ, , 6) ಸಂದೀಪ, 7) ವೀರೇಂದ್ರ, 8) ನಿಖಿಲ್‌ , 9)ರಕ್ಷಿತ್‌, 10)ಸುಜಿತ್‌, 11)ಸುದೀಪ್‌, 12)ಲತೀಶ್, 13) ಶರತ್‌, 14)ಸನತ್‌ , 15) ಪ್ರಶಾಂತ್‌ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

     ಬಂಧಿತರಿಂದ 4 ಹುಂಜ, ಮತ್ತು ಆಟಕ್ಕೆ ಬಳಸಿದ ಹಣ 2000/- ರೂಪಾಯಿ ಮತ್ತು ಕೋಳಿ ಬಾಳ್‌ ಹಾಗೂ 14 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

     ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 87 , 93 KP Act and 11 (1)A PREVENTION OF CRUELTY TO ANIMALS ACT ರಂತೆ ಪ್ರಕರಣ ದಾಖಲಾಗಿದೆ.

error: No Copying!