Spread the love

ಹೆಬ್ರಿ: ದಿನಾಂಕ : 29/02/2024 (ಹಾಯ್ ಉಡುಪಿ ನ್ಯೂಸ್) ನಾಲ್ಕೂರು ಗ್ರಾಮದ ಸರಕಾರಿ ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಹೆಬ್ರಿ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಮಹಾಂತೇಶ ಜಾಬ ಗೌಡ ಅವರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಮಹಾಂತೇಶ ಜಾಬ ಗೌಡ ಅವರಿಗೆ ದಿನಾಂಕ: 28-02-2024 ರಂದು ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಮಡಿವಾಳಬೆಟ್ಟು ಎಂಬಲ್ಲಿಯ ಕರಾವಳಿ ಕೋಳಿ ಫಾರಂ ಬಳಿಯ ಸರಕಾರಿ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕ ರಿಂದ  ಬಂದ ಖಚಿತ ಮಾಹಿತಿಯಂತೆ ಕೂಡಲೇ ಠಾಣಾ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದ್ದಾರೆ  ಎನ್ನಲಾಗಿದೆ.

      ಮರಗಳ ಕೆಳಗೆ ನೆಲದಲ್ಲಿ ಸುಮಾರು 5-6 ಜನರು ಸುತ್ತಲೂ ಕುಳಿತು ನೆಲದ ಮೇಲೆ ನ್ಯೂಸ್‌ಪೇಪರ್‌ ಹಾಸಿ ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಟೀಟ್ ಎಂಬ ಆಟವನ್ನು ಆಡುತ್ತಿದ್ದಲ್ಲಿಗೆ  ದಾಳಿ ಮಾಡಿದ್ದಾರೆ .

ಆಟದಲ್ಲಿ ನಿರತರಾಗಿದ್ದ 5 ಜನರರಾದ 1.ಶಶೀಧರ ಶೆಟ್ಟಿ, 2.ದಿನೇಶ, 3.ಕರುಣ, 4.ಯೊಗೀಶ, 5.ರವಿ ಮಡಿವಾಳ ಯಾನೆ ಕಿರ್ತನ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಅವರು ಆಟಕ್ಕೆ ಉಪಯೋಗಿಸಿದ ನಗದು ರೂ.9,700/-, ಇಸ್ಪೀಟ್ ಎಲೆಗಳು-52 ಮತ್ತು ನ್ಯೂಸ್ ಪೇಪರ್ ಸ್ಥಳದಲ್ಲಿ ಇದ್ದು ಇವುಗಳ ಬಗ್ಗೆ ವಿಚಾರಿಸಿದಾಗ ತಾವುಗಳು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜೂಜಾಟ ಆಡುತ್ತಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ ಎನ್ನಲಾಗಿದೆ.

     ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 87 KP ರಂತೆ ಪ್ರಕರಣ ದಾಖಲಾಗಿದೆ.

error: No Copying!