Spread the love
  • ಕೋಟ: ದಿನಾಂಕ 22/02/2024(ಹಾಯ್ ಉಡುಪಿ ನ್ಯೂಸ್) ಕೋಟ ಪೊಲೀಸ್‌ ಠಾಣೆಯ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಐದು ಜನರನ್ನು ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಧಾಪ್ರಭು ಅವರು ಬಂಧಿಸಿದ್ದಾರೆ.
  • ಕೋಟ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಸುಧಾ ಪ್ರಭು  ಅವರಿಗೆ ದಿನಾಂಕ :21-02-2024ರಂದು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ಮಾಹಿತಿ ಬಂದಂತೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
  • ಅಲ್ಲಿ ಕೋಳಿ ಅಂಕ ಜುಗಾರಿ ಆಟದಲ್ಲಿ ಕೋಳಿಗಳ ಕಾಲಿಗೆ ಬಾಳನ್ನು ಕಟ್ಟಿ ಅವುಗಳು ಕಾದಾಡುವಂತೆ ಮಾಡಿ ಹಿಂಸಾತ್ಮಕವಾಗಿ ಆಟ ಆಡಿಸಿ, ಅವುಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಆಟದಲ್ಲಿ ನಿರತರಾಗಿದ್ದ 1.ಗುಂಡು, 2.ಕರುಣಾಕರ , 3.ಹರ್ಷ , 4.ರಾಜು , 5.ರಮೇಶ್ ಎಂಬವರನ್ನು ಹಿಡಿದು ಬಂಧಿಸಿ ಅವರು ಆಟಕ್ಕೆ ಬಳಸಿದ ನಗದು 1000/- ರೂಪಾಯಿ, ಕೋಳಿ ಅಂಕಕ್ಕೆ ಬಳಸಿದ ಕೋಳಿಗಳು, ಕೋಳಿ ಬಾಳ್ ಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
  • ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 87, 93 KP ACT and 11 Cruelty to Animal Act ರಂತೆ ಪ್ರಕರಣ ದಾಖಲಾಗಿದೆ.

error: No Copying!