Spread the love

    ಉಡುಪಿ: ದಿನಾಂಕ:19-02-2024(ಹಾಯ್ ಉಡುಪಿ ನ್ಯೂಸ್) ಅಜ್ಜರಕಾಡು ನಿವಾಸಿಯೋರ್ವರ ಮನೆಯಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲನ್ನು ಕಳ್ಳರು ಕಳ್ಳತನ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. 

  •      ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ನಿವಾಸಿ ಶಶಿಕಾಂತ ನಾರಾಯಣ ಸಾಲಿಯಾನ್ ಎಂಬವರು ತಮ್ಮ KA20L2853 ಬೂದು ಬಣ್ಣದ  ಟಿ.ವಿ.ಎಸ್. ಸುಜುಕಿ ಮೋಟಾರ್ ಸೈಕಲನ್ನು   ದಿನಾಂಕ:17/02/2024 ರಂದು ಬೆಳಿಗ್ಗೆ  ಕೆಲಸಕ್ಕೆ ಹೋಗುವಾಗ ಮನೆಯ ಹಿಂದೆ ನಿಲ್ಲಿಸಿದ್ದ  ಮೋಟಾರ್ ಸೈಕಲನ್ನು ನೋಡಿದ್ದು, ದಿನಾಂಕ:19/02/2024 ರಂದು  ಬೆಳಿಗ್ಗೆ  ಕೆಲಸ ಮುಗಿಸಿ ವಾಪಸ್ಸು ಮನೆಗೆ ಬಂದು ನೋಡಿದಾಗ ಮನೆಯ ಹಿಂದೆ ನಿಲ್ಲಿಸಿದ್ದ ಮೋಟಾರ್ ಸೈಕಲನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ
  •     ಕಳವಾದ ಮೋಟಾರ್ ಸೈಕಲ್ ನ  ಅಂದಾಜು ಮೌಲ್ಯ ರೂ. 5000/- ಆಗಬಹುದು ಎನ್ನಲಾಗಿದೆ.
  •       ಅಜ್ಜರಕಾಡು, ಕಾಡುಬೆಟ್ಟು ಪರಿಸರದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಮಾಮೂಲಿ ಯಂತಾಗಿದ್ದು ರಾತ್ರಿ ಪಾಳಿಯಲ್ಲಿ ಪೊಲೀಸರ ರೌಂಡ್ಸ್  ಹೆಚ್ಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
  •      ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!