Spread the love

ಮಣಿಪಾಲ: ದಿನಾಂಕ: 11.02.2024(ಹಾಯ್ ಉಡುಪಿ ನ್ಯೂಸ್) ಮಣಿಪಾಲ ಪರಿಸರದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಮಣಿಪಾಲ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ರಾಘವೇಂದ್ರ ಸಿ ಅವರು ಬಂಧಿಸಿದ್ದಾರೆ.

  • ಮಣಿಪಾಲ ಠಾಣಾ ಪಿಎಸ್‌ಐ ರಾಘವೇಂದ್ರ ಸಿ ರವರು ದಿನಾಂಕ : 07-02-2024 ರಂದು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಣಿಪಾಲದ ಡಿಸಿ ಕಛೇರಿ ರಸ್ತೆಯ ಪಲ್ಲವಿ ಸ್ಟೋರ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೇರಳ ಮೂಲದ ಅಹಬ್ ಅಬ್ದುಲ್ಲಾ ಶಮೀಮ್ (Ahab Abdullah Shameem Kozhikode Kerala –) ಎಂಬವನನ್ನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಬಂಧಿಸಿ ವಶಕ್ಕೆ ಪಡೆದಿದ್ದಾರೆ.
  • ಅದೇ ದಿನ ದಿನಾಂಕ: 07.02.2024 ರಂದು ಆ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆರೋಪಿಯು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ ಎಂಬುದಾಗಿ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರವನ್ನು ನೀಡಿರುತ್ತಾರೆ ಎನ್ನಲಾಗಿದೆ .
  • ‌ಈ ಬಗ್ಗೆ  ಮಣಿಪಾಲ ಠಾಣೆಯಲ್ಲಿ ಕಲಂ: 27(b) NDPS ಕಾಯದೆ ಯಂತೆ ಪ್ರಕರಣ ದಾಖಲಾಗಿದೆ. 

error: No Copying!