ಕೋಟ: ದಿನಾಂಕ : 09-02-2024(ಹಾಯ್ ಉಡುಪಿ ನ್ಯೂಸ್) ಸಾಸ್ತಾನ ಟೋಲ್ ಗೇಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವೀ ಟಿ.ಐ. ರವರು ದಿನಾಂಕ: 09.02.2024 ರಂದು ಬೆಳಿಗ್ಗೆ ಠಾಣೆಯಲ್ಲಿರುವಾಗ ಸಾರ್ವಜನಿಕರೊಬ್ಬರು ಪೋನ್ ಮಾಡಿ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಟೋಲ್ ಗೇಟ್ ನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಗಾಂಜಾ ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿ ಅಮಲಿನಲ್ಲಿರುವುದಾಗಿ ಮಾಹಿತಿ ತಿಳಿಸಿದ ಮೇರೆಗೆ ಕೂಡಲೇ ಸ್ಥಳಕ್ಕೆ ಠಾಣೆಯ ಸಿಬ್ಬಂದಿಗಳನ್ನು ಕಳುಹಿಸಿಕೊಟ್ಟು ಗುಂಡ್ಮಿ ಗ್ರಾಮದ ಸಾಸ್ತಾನ ಟೋಲ್ ಗೇಟ್ ನ ಬಳಿ ಹೋಗಿ ಅಲ್ಲಿ ಅಮಲಿನಲ್ಲಿದ್ದ ಆಪಾದಿತನಾದ ಗುಂಡ್ಮಿ ಗ್ರಾಮದ ನಿವಾಸಿ ಅಫ್ವಾನ್ (26) ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆತ ಮಾದಕದ್ರವ್ಯ ಸೇವನೆ ಮಾಡಿದ್ದ ಅನುಮಾನದ ಮೇರೆಗೆ ಅವನನ್ನು ವೈದ್ಯಕೀಯ ತಪಾಸಣೆ ನಡೆಸಲು ಸಮುದಾಯ ಆರೋಗ್ಯ ಕೇಂದ್ರ, ಕೋಟ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅಲ್ಲಿಂದ ಬಂದ ವರದಿಯಲ್ಲಿ ಆಪಾದಿತನಾದ ಅಫ್ವಾನ್ (26) ನು ನಿಷೇಧಿತ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವಿಸಿರುವುದು ಧೃಢ ಪಟ್ಟಿರುತ್ತದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಠಾಣಾ ಕಲಂ: 27(B) NDPS ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.