ಉಡುಪಿ: ದಿನಾಂಕ:03-02-2024(ಹಾಯ್ ಉಡುಪಿ ನ್ಯೂಸ್) ಇನ್ಶೂರೆನ್ಸ್ ಹಣ ಪಡೆಯುವ ದುರಾಲೋಚನೆ ಯಿಂದ ಖಾಸಗಿ ಆಸ್ಪತ್ರೆಯೊಂದರ ಹೆಸರಲ್ಲಿ ನಕಲಿ ಬಿಲ್ಲುಗಳನ್ನು ಸ್ರಷ್ಟಿಸಿ ವೈದ್ಯರ ನಕಲಿ ಸಹಿ ಹಾಕಿ ಫೋರ್ಜರಿ ನಡೆಸಿರುವ ಬಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಿ.ಎಸ್.ಐ ಲಾಂಬೋರ್ಡ್ ಮೆಮೋರಿಯಲ್ ಆಸ್ಪತ್ರೆ, ಉಡುಪಿ ಇಲ್ಲಿನ ಆಡಳಿತ ಅಧಿಕಾರಿಯಾಗಿರುವ ದೀನಾ ಪ್ರಭಾವತಿ ಯವರು ಪೊಲೀಸರಿಗೆ ನೀಡಿರುವ ದೂರಿನಂತೆ ದಿನಾಂಕ 03/08/2019 ರಂದು ಆರೋಪಿ ಜಹೀನಾಬ್ ಮುಜಾಫರ್ ಎಂಬವರು ಉಡುಪಿಯ ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆದಿದ್ದು ನಂತರ ಯಾವುದೇ ಚಿಕಿತ್ಸೆಯನ್ನು ಲೊಂಬಾರ್ಡ್ ಆಸ್ಪತ್ರೆಯಲ್ಲಿ ಪಡೆದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
2ನೇ ಆರೋಪಿ ಮುಜಾಫರ್ ಅಲಿ ಮೊಹಮ್ಮದ್ ಶರೀಫ್, 3ನೇ ಆರೋಪಿ ಲುಭ್ನಾ ಬಾನು ಮತ್ತು 4ನೇ ಆರೋಪಿ ಪುರ್ಕಾನ್ ಮುಜಾಫರ್ ಎಂಬವರು ಒಟ್ಟಿಗೆ ಸೇರಿಕೊಂಡು ಲೊಂಬಾರ್ಡ್ ಆಸ್ಪತ್ರೆಯ ಡಾಕ್ಟರ್ ರವರ ನಕಲಿ ಸಹಿಯನ್ನು ಬಳಸಿ ನಕಲು ಬಿಲ್ಲುಗಳು ಮತ್ತು ಡಿಸ್ಚಾರ್ಚ್ ಸಮ್ಮರಿಯನ್ನು ಸ್ರಷ್ಟಿಸಿ ವಿದೇಶದ ಕಂಪನಿ Bhoopa Arabia for Co-operative Insurance Company ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇನ್ಸುರೆನ್ಸ್ ಕಂಪನಿಯವರು ಬಿಲ್ಲುಗಳ ಮತ್ತು ಡಿಸ್ಚಾರ್ಚ್ ಸಮ್ಮರಿಗಳ ನೈಜತೆಯನ್ನು ತಿಳಿಯಲು ಸಿಎಸ್ಐ ಲಾಂಬೋರ್ಡ್ ಮೆಮೋರಿಯಲ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿಗಳು ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ವೈದ್ಯರ ನಕಲಿ ಫೋರ್ಜರಿ ಸಹಿ ಯನ್ನು ಮಾಡಿದ್ದಾರೆ ಎಂದು ಸಿಎಸ್ಐ ಲಾಂಬೋರ್ಡ್ ಮೆಮೋರಿಯಲ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿರುವ ದೀನಾ ಪ್ರಭಾವತಿಯವರು ಪೊಲೀಸರಿಗೆ ದೂರು ನೀಡಿದ್ದಾರೆ
ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 465, 468, 471, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.