ಅಜೆಕಾರು: ದಿನಾಂಕ :25-01-2024 (ಹಾಯ್ ಉಡುಪಿ ನ್ಯೂಸ್) ಅಜೆಕಾರು ಪೇಟೆಯ ರಿಕ್ಷಾ ಚಾಲಕ ಪವಿತ್ರ (42) ಎಂಬವರಿಗೆ ಅದೇ ನಿಲ್ದಾಣದ ರಿಕ್ಷಾ ಚಾಲಕನೋರ್ವ ಹಲ್ಲೆ ನಡೆಸಿದ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ,ಮರ್ಣೆ ಗ್ರಾಮದ ಪವಿತ್ರ (42) ಎಂಬವರು ದಿನಾಂಕ 24/01/2024 ರಂದು ಸಂಜೆ ರಿಕ್ಷಾವನ್ನು ಬಾಡಿಗೆಗಾಗಿ ಹುಡುಕಿಕೊಂಡು ಬಂದ ಒಬ್ಬರನ್ನು ಅಜೆಕಾರು ಪೇಟೆಯಿಂದ ಗುಡ್ಡೆಯಂಗಡಿಯವರೆಗೆ ಬಿಟ್ಟು ವಾಪಾಸು ಸಂಜೆ ಅಜೆಕಾರು ಪೇಟೆಯ ಬಸ್ ತಂಗುದಾಣಕ್ಕೆ ಬಂದು ರಿಕ್ಷಾವನ್ನು ನಿಲ್ಲಿಸಿ, ಅಜೆಕಾರು ಬಸ್ ನಿಲ್ದಾಣದ ಕಡೆಗೆ ಬರುತ್ತಿರುವಾಗ, ಅಜೆಕಾರು ರಿಕ್ಷಾ ನಿಲ್ದಾಣದಲ್ಲಿ ಕ್ಯೂನಲ್ಲಿ ರಿಕ್ಷಾ ಚಾಲನೆ ಮಾಡಿಕೊಂಡಿರುವ ಸುಕೇಶ ಎಂಬಾತನು ಪವಿತ್ರರವರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈಯ್ದು, ಕೈಯಿಂದ ಪವಿತ್ರರವರ ಮುಖಕ್ಕೆ ಹಾಗೂ ಕೆನ್ನೆಗೆ ಹೊಡೆದು ತಳ್ಳಿದ ಪರಿಣಾಮ ಪವಿತ್ರರವರು ನೆಲಕ್ಕೆ ಬಿದ್ದಿರುತ್ತಾರೆ ಎಂದು ದೂರಿದ್ದಾರೆ.
ಪವಿತ್ರ ಅವರು ನೆಲಕ್ಕೆ ಬಿದ್ದ ನಂತರ ಕ್ಯೂನಲ್ಲಿದ್ದ ಇತರೇ ರಿಕ್ಷಾ ಚಾಲಕರು ಸುಕೇಶನನ್ನು ತಡೆದಿದ್ದಾರೆ ಎಂದು ಪವಿತ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕಲಂ: 341, 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣದಲ್ಲಿ ಸುಕೇಶರವರಿಗೆ ಪವಿತ್ರ ರವರು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆಂದು ಸುಕೇಶರವರು ಪ್ರತಿ ದೂರು ದಾಖಲಿಸಿದ್ದಾರೆ.