ಉಡುಪಿ: ದಿನಾಂಕ: 13-01-2024(ಹಾಯ್ ಉಡುಪಿ ನ್ಯೂಸ್) ಮಹಾರಾಷ್ಟ್ರದ ರಾಯ್ ಘಡ್ ಜಿಲ್ಲೆಯ ಹೆದ್ದಾರಿಯಲ್ಲಿ ಸಂಚರಿಸುವ ಟ್ರಕ್ ಡ್ರೈವರ್ ಗಳನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ ಎಂಬ ವೀಡಿಯೋ ವಾಟ್ಸಾಪ್ ನಲ್ಲಿ ವೈರಲ್ ಆಗುತ್ತಿದೆ.
ಮಹಾರಾಷ್ಟ್ರ ದ ಶ್ರೀಮಂತ ರಾಜಕೀಯ ನಾಯಕನೋರ್ವನ ಮಗ ಟ್ರಕ್ ನಡಿಗೆ ಸಿಲುಕಿ ಮ್ರತಪಟ್ಟಿದ್ದಾನೆ ಎಂದು ವೀಡಿಯೋದಲ್ಲಿ ಹೇಳಲಾಗಿದೆ. ತನಗಿದ್ದ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡ ಸರ್ಪಂಚ (ನಾಯಕ) ನೂರ ಒಂದು ಟ್ರಕ್ ಚಾಲಕರನ್ನು ಸೀಳಿ ಹಾಕುವುದಾಗಿ ಪ್ರತಿಜ್ಞೆ ತೊಟ್ಟಿದ್ದು ಇದೀಗ ರಾಯ್ ಘಡ್ ಹೆದ್ದಾರಿ ಯಲ್ಲಿ ಸಂಚರಿಸುತ್ತಿರುವ ಟ್ರಕ್ ಚಾಲಕರನ್ನು ಹಿಡಿದು ಕುತ್ತಿಗೆ ಕಡಿದು ಅವರ ದೇಹವನ್ನು ಛಿದ್ರ ಗೊಳಿಸಲಾಗುತ್ತಿದೆ ಎಂಬ ಅಮಾನುಷ ಕೃತ್ಯ ನಡೆಸುತ್ತಿರುವ ವೀಡಿಯೋ ಹರಿದಾಡುತ್ತಿದೆ.
ಇದು ನಿಜವೇ ಆಗಿದ್ದರೆ ಸಂಬಂಧಿತ ಪೊಲೀಸ್ ಇಲಾಖೆ ಕೂಡಲೇ ಕಠಿಣ ಕ್ರಮ ಕೈಗೊಂಡು ಅಪರಾಧಿಗಳನ್ನು ಬಂಧಿಸಬೇಕು ಹಾಗೂ ಟ್ರಕ್ ಚಾಲಕರು ಸಮಸ್ಯೆ ಬಗೆಹರಿಯುವ ವರೆಗೆ ಸೂಕ್ತ ರಕ್ಷಣೆ ಇಲ್ಲದೆ ಉತ್ತರ ಭಾರತದ ಕಡೆಗೆ ಪ್ರಯಾಣ ಬೆಳಸದೆ ತಮ್ಮ ಸುರಕ್ಷತೆ ಯನ್ನು ಮಾಡಿಕೊಳ್ಳಬೇಕಾಗಿದೆ.