ಕಾರ್ಕಳ: ದಿನಾಂಕ:12-01-2024( ಹಾಯ್ ಉಡುಪಿ ನ್ಯೂಸ್) ಹಿರ್ಗಾನ ಗ್ರಾಮದ ನಿವಾಸಿಯೋರ್ವರ ಮಗ ಹಾಗೂ ಸೊಸೆಯ ಸಾಂಸಾರಿಕ ಜೀವನದಲ್ಲಿ ಹೊಂದಾಣಿಕೆ ಇರದೆ ಬೇರ್ಪಟ್ಟಿರುವ ಬಗ್ಗೆ ಮಾತುಕತೆಗೆ ಬಂದವರು ಬೈದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನಿವಾಸಿ ಯುನೂಸ್ (67) ಎಂಬವರ ಮಗ ಸುಹೇಲ್ ಎಂಬವರಿಗೆ ಬಂಗ್ಲೆಗುಡ್ಡೆ ನಿವಾಸಿ ನಿಸ್ಬಾ ಭಾನು ಎಂಬವರೊಂದಿಗೆ ದಿನಾಂಕ 26/01/2022 ರಂದು ವಿವಾಹವಾಗಿದ್ದು, ವಿವಾಹದ ನಂತರ ಗಂಡ ಹೆಂಡತಿಯವರಲ್ಲಿ ಹೊಂದಾಣಿಕೆ ಇಲ್ಲದೆ ಇರುವ ಕಾರಣ ಬೇರೆ ಬೇರೆ ವಾಸವಾಗಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವಿಚಾರವಾಗಿ ರಾಜಿ ಮಾತುಕತೆ ಮಾಡಿಕೊಳ್ಳಲು ದಿನಾಂಕ 10/01/2024 ರಂದು ಸಂಜೆ ಕಾರ್ಕಳದ ಕಸಬಾ ಗ್ರಾಮದ ಜಾಮೀಯಾ ಮಸೀದಿಯಲ್ಲಿ ಎರಡು ಮನೆ ಕಡೆಯವರು ಹಾಜರಿದ್ದು ಮಾತುಕತೆ ನಡೆಸಿದ್ದು ಮಾತುಕತೆ ಮುಗಿಸಿದ ನಂತರ ರಾತ್ರಿ ಯುನೂಸ್ ಅವರ ಮಗ ಸುಹೇಲ್ ನು ತನ್ನ ಮಗನನ್ನು ಎತ್ತಿಕೊಂಡಿರುವಾಗ ಆಪಾದಿತರಾದ ಅಶ್ರಫ್ ಹಾಗೂ ನಜೀರ್ ಎಂಬವರು ಸುಹೇಲ್ ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಲು ಪ್ರಯತ್ನಿಸಿದಾಗ ಯುನೂಸ್ ಅವರು ಅವರನ್ನು ಬಿಡಿಸಲು ಹೋಗಿದ್ದು ಈ ಸಮಯ ಆಪಾದಿತ ಅಶ್ರಫ್‌ನು ಬಲಕೈ ಮದ್ಯದ ಬೆರಳಿಗೆ ಕಚ್ಚಿ ಗಾಯಗೊಳಿಸಿ ಯುನೂಸ್ ಅವರಿಗೆ ಹಾಗೂ ಅವರ ಮಗ ಸುಹೇಲ್‌ರವರಿಗೆ ಹಲ್ಲೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರಿದ್ದಾರೆ.
ಹಲ್ಲೆ ಮಾಡಿದ ಬಳಿಕ ಆಪಾದಿತ ಅಶ್ರಫ್‌ನು ಐ-10 ಕಾರಿನಲ್ಲಿ ಹಾಗೂ ನಜೀರ್‌ನು ಮೋಟಾರ್ ಸೈಕಲ್‌ನಲ್ಲಿ ಹೋಗಿರುತ್ತಾರೆ ಎಂದಿದ್ದಾರೆ. ಗಾಯಗೊಂಡ ಪಿರ್ಯಾದಿದಾ. ಯುನೂಸ್ ರವರು ಚಿಕಿತ್ಸೆಯ ಬಗ್ಗೆ ಕಾರ್ಕಳದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 323, 341 , 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.