Spread the love

ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು…….

1) ತೀವ್ರವಾಗಿ ಕುಸಿಯುತ್ತಿರುವ ಜನರ ಆರೋಗ್ಯ…….

2) ಅತ್ಯಂತ ವೇಗವಾಗಿ ನಾಶವಾಗುತ್ತಿರುವ ಪರಿಸರ ರಕ್ಷಣೆ….

3) ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ಕಾರಣ ಅಭಿವೃದ್ಧಿಯ ಅಸಮರ್ಪಕ ನಿರ್ವಹಣೆ….

4) ಚುನಾವಣಾ ರಾಜಕೀಯದ ಕಾರಣ ಭಾರತೀಯ ಸಾಮಾಜಿಕ ವ್ಯವಸ್ಥೆ ದ್ವೇಷ ಅಸೂಯೆಗಳ ಗೂಡಾಗಿ ಮನಸ್ಸುಗಳು ಒಡೆಯುತ್ತಿವೆ. ಅದನ್ನು ಒಂದುಗೂಡಿಸುವ ಪ್ರಯತ್ನ ಆಗಬೇಕಿದೆ….

5) ಜಾತಿ ಪದ್ದತಿಯ ನಿರ್ಮೂಲನೆಗೆ ಸಣ್ಣ ಪ್ರಮಾಣದ ಪ್ರಯತ್ನಗಳಾದರು ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ…..

6) ಭಾರತೀಯ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಹಿಂಸಾತ್ಮಕ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಬೇಕಿದೆ….

7) ಅರ್ಹತೆಗೆ ತಕ್ಕಂತ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸಿ ಹೊಟ್ಟೆಪಾಡಿನ ಉದ್ಯೋಗಗಳೇ ಹೆಚ್ಚಾಗುತ್ತಿರುವುದು ನಿರುದ್ಯೋಗ ಹೆಚ್ಚಾಗಲು ಕಾರಣವಾಗಿ ಭವಿಷ್ಯದಲ್ಲಿ ಆಗುವ ದುಷ್ಪರಿಣಾಮಗಳನ್ನು ತಡೆಯಲು ಈಗಿನಿಂದಲೇ ಪ್ರಯತ್ನಿಸಬೇಕಿದೆ….

8) ರೈತರ ಆತ್ಮಹತ್ಯೆ ಮತ್ತು ಕೃಷಿ ದಿನೇ ದಿನೇ ಶೋಚನೀಯ ಸ್ಥಿತಿ ತಲುಪುತ್ತಿದೆ. ಅದಕ್ಕೆ ಪರಿಹಾರವನ್ನು ಯುದ್ದೋಪಾದಿಯಲ್ಲಿ ಪರಿಹರಿಸಬೇಕಾಗಿದೆ….

9) ಆಹಾರದ ಕಲಬೆರಕೆ ಭಾರತೀಯರ ಆಯಸ್ಸನ್ನೇ ಕಡಿಮೆ ಮಾಡುತ್ತಿದೆ. ಅದಕ್ಕೆ ತತ್ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕಿದೆ….

10) ಮಾದಕ ವಸ್ತುಗಳ ನಿಯಂತ್ರಣ ಮತ್ತು ಆನ್ ಲೈನ್ ಜೂಜು ಕೇಂದ್ರಗಳ ನಿಷೇಧ ಹೇರದಿದ್ದರೆ ಯುವ ಸಮೂಹ ಸಂಪೂರ್ಣ ನಾಶವಾಗುತ್ತದೆ. ಅದಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕಿದೆ…..

ಆದರೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ರಾಜಕಾರಣಿಗಳು, ಅಧಿಕಾರಿಗಳು, ಧಾರ್ಮಿಕ ಮುಖಂಡರು, ಹೋರಾಟಗಾರರು ಚರ್ಚೆ ಮಾಡುತ್ತಿರುವ ವಿಷಯಗಳು ಬೇರೆಯೇ ಇದೆ……

1) ಮುಂದಿನ ಲೋಕಸಭಾ ಚುನಾವಣೆಯನ್ನು ಯಾವ ಯಾವ ತಂತ್ರಗಳನ್ನು ಉಪಯೋಗಿಸಿ ಗೆಲ್ಲಬೇಕು ಎಂಬುದೇ ಬಹುಮುಖ್ಯ ಚರ್ಚೆಯ ವಿಷಯವಾಗಿದೆ…..

2) ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಸಮಾರಂಭದ ರಾಜಕೀಯ ಲಾಭಗಳನ್ನು ಹೇಗೆ ಪಡೆಯಬೇಕು……..

3) ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರನ್ನು ಯಾವ ರೀತಿ ಆಕರ್ಷಿಸಬೇಕು……

4) ಜಾತಿ ಜನಗಣತಿಯ ವಿಷಯವನ್ನು ಹೇಗೆ ಚುನಾವಣಾ ತಂತ್ರವಾಗಿ ಲಾಭ ಮಾಡಿಕೊಳ್ಳಬೇಕು……

5) ಹಿಂದೂ ಮುಸ್ಲಿಂ ಮತದಾರರನ್ನು ಯಾವ ರೀತಿಯಲ್ಲಿ ವಿಭಜಿಸಿ ಅದನ್ನೇ ಪ್ರಮುಖ ಅಸ್ತ್ರವಾಗಿ ಅಧಿಕಾರ ಹಿಡಿಯಬಹುದು….

6) ಎಡಪಂಥೀಯ ಮತ್ತು ಬಲಪಂಥೀಯ ವಿಚಾರಗಳ ಮೇಲೆಯೇ ನಮ್ಮ ಅಭಿಪ್ರಾಯ ರೂಪಿಸಿಕೊಂಡು ಅನವಶ್ಯಕವಾಗಿ ಚರ್ಚಿಸುತ್ತಾ ಕಾಲ ಕಳೆಯುವುದು……

7) ಆರ್ಯ – ದ್ರಾವಿಡ ಸಂಸ್ಕೃತಿಗಳ ಆಧಾರದ ಮೇಲೆ ವಿಭಜನಾತ್ಮಕ ಮನಸ್ಥಿತಿಯನ್ನು ಜನರಲ್ಲಿ ಬಿತ್ತುವುದು…..

8) ನೀರು – ಭಾಷೆಯ ವಿವಾದಗಳನ್ನು ಸದಾ ಚರ್ಚಿಸುತ್ತ ಅದನ್ನು ವಿವಾದವಾಗಿ ಸದಾ ಜೀವಂತ ಇಡುವುದು…..

9) ಟೋಲ್ ಪೆಟ್ರೋಲ್ ಗ್ಯಾಸ್ ಜಿಎಸ್ಟಿ ಆಹಾರ ಪದಾರ್ಥಗಳು ಮುಂತಾದ ಬೆಲೆಗಳನ್ನು ಏರಿಸುತ್ತಾ ಒಮ್ಮೊಮ್ಮೆ ಅಲ್ಪ ಪ್ರಮಾಣದಲ್ಲಿ ಇಳಿಸುತ್ತಾ ಜನರಲ್ಲಿ ಅದರ ಬಗ್ಗೆಯೇ ಯೋಚಿಸುವಂತೆ ಮಾಡುವುದು..‌.‌..‌

10) ನಿರುದ್ಯೋಗ ನಿವಾರಣೆಯ ಭರವಸೆ, ವಿದೇಶದಿಂದ ಕಪ್ಪು ಹಣದ ತರುವ ಆಶ್ವಾಸನೆ ಹೀಗೆ ಮತ್ತೆ ಮತ್ತೆ ಅದೇ ವಿಷಯಗಳ ಪ್ರಸ್ತಾಪ……

ಹೀಗೆ ಜನರ ಮೂಲಭೂತ ಅವಶ್ಯಕತೆಗಳೇ ಬೇರೆ. ಜನಸಾಮಾನ್ಯರು ಸೇರಿ ಎಲ್ಲರೂ ಚರ್ಚಿಸುವ ವಿಷಯಗಳೇ ಬೇರೆ……

ಒಟ್ಟಿನಲ್ಲಿ ಇಡೀ ದೇಶ ರಾಜಕಾರಣಿಗಳ ಅಧಿಕಾರ ದಾಹದ ಸುತ್ತಲೇ ಸುತ್ತುತ್ತ ಪ್ರಜಾಪ್ರಭುತ್ವ ಪರೋಕ್ಷವಾಗಿ ರಾಜಪ್ರಭುತ್ವದ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವಂತಿದೆ. ಜಾಗೃತರಾಗಬೇಕಾದವರು ಕಾರ್ಪೊರೇಟ್ ಸಂಸ್ಥೆಗಳು ತಂತ್ರಗಾರಿಕೆಗೆ ಬಲಿಯಾಗಿ ಅವರ ಗುಲಾಮರಾಗಿಯೇ ತಮಗರಿವಿಲ್ಲದೆ ಬಂಧಿಯಾಗಿದ್ದಾರೆ…..

ಏಳು ಸುತ್ತಿನ ಕೋಟೆಯ ಒಳಗೆ ನುಗ್ಗುವ ಕೆಲಸವನ್ನು ಪ್ರಜ್ಞಾವಂತರು ಮಾಡಬೇಕಿದೆ. ಅದು ಕಷ್ಟದ ಕೆಲಸವಾದರು ಅಸಾಧ್ಯವಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!