Spread the love

ಉಡುಪಿ: ದಿನಾಂಕ: ,26-12-2023(ಹಾಯ್ ಉಡುಪಿ ನ್ಯೂಸ್) ನಗರದ ರಿಕ್ಷಾ ಚಾಲಕರೋರ್ವರಿಗೆ ಐದು ಜನ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡ್ಕದಕಟ್ಟೆ, ಪುತ್ತೂರು ನಿವಾಸಿ ಮಂಜುನಾಥ 40) ಎಂಬವರು ಉಡುಪಿಯಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 25/12/2023 ರಂದು ರಾತ್ರಿ ಸುಮಾರು 11 ಗಂಟೆಯ ಸಮಯಕ್ಕೆ ರಿಕ್ಷಾ ಚಲಾಯಿಸಿಕೊಂಡು ವಾಪಾಸು ಬರುತ್ತಿರುವಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಟೈಮ್ಸ್‌ ಸ್ಕ್ವೇರ್‌ ಮಾಲ್‌ ಹತ್ತಿರ ರಸ್ತೆಯ ಬದಿಯಲ್ಲಿ 2 ಮೋಟಾರ್‌ ಸೈಕಲ್‌ ನಿಲ್ಲಿಸಿ 5 ಜನ ಹುಡುಗರು ನಿಂತುಕೊಂಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ಯುವಕರಲ್ಲಿ ಒಬ್ಬನು ಗಾಜಿನ ಬಾಟಲಿಯನ್ನು ರಸ್ತೆಯ ಮೇಲೆ ಬಿಸಾಡಿದ್ದು, ಆ ಸಮಯದಲ್ಲಿ ಮಂಜುನಾಥ ರವರು ರಿಕ್ಷಾವನ್ನು ನಿಲ್ಲಿಸಿ ಅವರ ಹತ್ತಿರ ಹೋಗಿ ಏನಾಯಿತು ಬಾಟಲಿ ಯಾಕೆ ಬಿಸಾಡಿದಿರಿ ಎಂದು ಕೇಳಿದ್ದಾರೆ ಎಂದಿದ್ದಾರೆ.

ಆಗ ಯುವಕರು ಯಾವುದೇ ಉತ್ತರವನ್ನು ನೀಡದೇ ಇದ್ದು ನಂತರ ಮಂಜುನಾಥ ರವರು ಆಟೋ ಚಲಾಯಿಸಿಕೊಂಡು ಕಲ್ಸಂಕ ಜಂಕ್ಷನ್ ಬಳಿ ಹೋಗುವಾಗ ಮೋಟಾರ್ ಸೈಕಲ್ ನಲ್ಲಿ ಅಟೋ ರಿಕ್ಷಾದ ಎದುರಿಗೆ ಬಂದು ಆಪಾದಿತರು 5 ಜನ ಯುವಕರು ಅವಾಚ್ಯ ಶಬ್ಧಗಳಿಂದ ಬೈದು  ಕೈಯಿಂದ ಎಡ ಮತ್ತು ಬಲ ಕೆನ್ನೆಗೆ ಹೊಡೆದಿದ್ದು, ಮತ್ತೊಬ್ಬನು ಕಾಲಿನಿಂದ ಎದೆಗೆ ಸೊಂಟಕ್ಕೆ ತುಳಿದಿದ್ದಾರೆ ಎಂದಿದ್ದಾರೆ,

ಮಂಜುನಾಥರವರು ಕಿರುಚಾಡಿದಾಗ ಆಪಾದಿತ ಯುವಕರು ತಮ್ಮ 2 ಮೋಟಾರ್ ಸೈಕಲ್ ನಲ್ಲಿ  ಅಲ್ಲಿಂದ  ಪರಾರಿಯಾಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143,147,341,504,323 R/W 149 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!