ಹಿರಿಯಡ್ಕ: ದಿನಾಂಕ: 24-12-2023(ಹಾಯ್ ಉಡುಪಿ ನ್ಯೂಸ್) ಗುಡ್ಡೆಯಂಗಡಿ ಪರಿಸರದ ವಿದ್ಯುತ್ ಪರಿವರ್ತಕ ದುರಸ್ತಿಯ ವೇಳೆ ಆಕಸ್ಮಿಕ ವಾಗಿ ವಿದ್ಯುತ್ ಸ್ಪರ್ಶಿಸಿ ಮೆಸ್ಕಾಂ ಇಲಾಖೆಯ ಜೂನಿಯರ್ ಲೈನ್ ಮ್ಯಾನ್ ಮ್ರತ ಪಟ್ಟ ದುರ್ಘಟನೆ ನಡೆದಿದೆ.
ಬೆಳಗಾವಿ,ಗೋಕಾಕ್ ತಾಲೂಕು, ನಿವಾಸಿ ಮಾಂತೇಶ ಶಿವಲಿಂಗಪ್ಪ ಅಂಗಡಿ (50) ಎಂಬವರ ಮಗ ಉಮೇಶ (29) ಎಂಬವರು ಕಳೆದ 8 ವರ್ಷಗಳಿಂದ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಜ್ಯುನಿಯರ್ ಲೈನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ,
ಉಮೇಶ ಹಾಗೂ ಸಹೋದ್ಯೋಗಿ ರಮೇಶ ಎಂಬವರು ದಿನಾಂಕ 22/12/2023 ರಂದು ಸಾರ್ವಜನಿಕರಿಂದ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ದೂರು ಬಂದ ಮೇರೆಗೆ ಬೊಮ್ಮಾರಬೆಟ್ಟು ಗ್ರಾಮದ ಗುಡ್ಡೆಯಂಗಡಿ- ಕೈರಾಳಿ ನಾಗಬನದ ಬಳಿಯ ವಿದ್ಯುತ್ ಪರಿವರ್ತಕದಲ್ಲಿ ತೊಂದರೆ ಇದ್ದು, ರಮೇಶ ರವರು ಪರಿವರ್ತಕ ಹತ್ತಿ ರಿಪೇರಿ ಮಾಡಿದ್ದು, ನಂತರ ಉಮೇಶನು ಪರಿವರ್ತಕದಲ್ಲಿ ಫ್ಯೂಜ್ ಹಾಕಲು ಪರಿವರ್ತಕವನ್ನು ಹತ್ತಿದಾಗ ಆಯ ತಪ್ಪಿ ಲೈನ್ ನಿಂದ ವಿದ್ಯುತ್ ಆತನ ಬಲಕೈಗೆ ಆಕಸ್ಮಿಕವಾಗಿ ಹರಿದು ಮೇಲಿನಿಂದ ತಲೆ ಕೆಳಗಾಗಿ ಬಿದ್ದಿದ್ದು, ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ .
ಆ ಕೂಡಲೇ ರಮೇಶ ರವರು ಆಟೋ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ . ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದು, ಉಮೇಶನು ವಿದ್ಯುತ್ ಪರಿವರ್ತಕ ಹತ್ತಿದಾಗ ಆಕಸ್ಮಿಕವಾಗಿ ವಿದ್ಯುತ್ ಲೈನ್ ತಾಗಿ ವಿದ್ಯುತ್ ಹರಿದು ಮೃತಪಟ್ಟಿರುತ್ತಾನೆ ಎಂದು ದೂರು ದಾಖಲಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.