Spread the love
  • ಮಣಿಪಾಲ:  ದಿನಾಂಕ 19/12/2023 (ಹಾಯ್ ಉಡುಪಿ ನ್ಯೂಸ್) ಕಬ್ಯಾಡಿ ಕಂಬಳಗದ್ದೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಹನ್ನೊಂದು ಜನರನ್ನು ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ,ರವರು ಬಂಧಿಸಿದ್ದಾರೆ.
  • ಮಣಿಪಾಲ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ ಅವರಿಗೆ ದಿನಾಂಕ:18-12-2023ರಂದು   ಹಿರೇಬೆಟ್ಟು ಗ್ರಾಮದ ದೂಮವತಿ ದೈವಸ್ಥಾನದ ಹತ್ತಿರ ಕಬ್ಯಾಡಿ ಕಂಬಳ ಗದ್ದೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಕೋಳಿ ಬಾಳ್ ಗಳನ್ನು ಕಟ್ಟಿ. ಒಂದಕ್ಕೊಂದು ತಿವಿದುಕೊಳ್ಳುವಂತೆ ಮಾಡಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು ಆ ಕೂಡಲೇ ಸ್ಥಳಕ್ಕೆ ದಾಳಿ ಮಾಡಿದ್ದಾರೆ .
  • ಪೊಲೀಸ್ ದಾಳಿ ನಡೆಸಿದಾಗ ಅಲ್ಲಿ ಕೋಳಿ ಅಂಕ ನಡೆಸುತ್ತಿದ್ದ 1) ಶುಭಕರ ,  2) ರಾಕೇಶ , 3) ಉಮೇಶ , 4) ವಿಘ್ನೇಶ,  5) ವಿವೇಕ , 6) ದಿನೇಶ , 7) ರತ್ನಾಕರ , 8) ವಿಠಲ, 9) ರಾಜೇಶ ,  10) ಜಯ,  11) ಸುಂದರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ . ಕೋಳಿ ಅಂಕಕ್ಕೆ ಬಳಸಿದ ರೂಪಾಯಿ 5,450/- ಮೌಲ್ಯದ 10 ಹುಂಜ ಹಾಗೂ ಆಟಕ್ಕೆ ಬಳಸಿದ ನಗದು ಹಣ 2800/- ಮತ್ತು ಕೋಳಿ ಬಾಳ್‌ಗಳನ್ನು  ವಶಕ್ಕೆ ಪಡೆದುಕೊಂಡಿದ್ದಾರೆ .
  • ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 87 , 93  KP Act ರಂತೆ ಪ್ರಕರಣ ದಾಖಲಾಗಿದೆ .

error: No Copying!