Spread the love

ಅಮಾಸೆಬೈಲು: ದಿನಾಂಕ:11-12-2023 (ಹಾಯ್ ಉಡುಪಿ ನ್ಯೂಸ್) ವಯೋವೃದ್ಧ ತಾಯಿಯ ಆಸ್ತಿಯನ್ನು ಮಗಳು ಮೋಸದಿಂದ ತನ್ನ ಹೆಸರಿಗೆ ಮಾಡಿ ಕೊಂಡಿದ್ದಾಳೆ ಎಂದು ಆರೋಪಿಸಿ ವ್ರಧ್ಧೆ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

  ಹೆಬ್ರಿ ತಾಲೂಕು  ಶೇಡಿಮನೆ ಗ್ರಾಮದ ನಿವಾಸಿ ಭಾಗೀರತಿ ಅಮ್ಮ (84) ಎಂಬವರಿಗೆ ಸರ್ವೆ ನಂ:20/02ರಲ್ಲಿ 0.45 ಎಕ್ರೆ ಮತ್ತು 20/03 ರಲ್ಲಿ 2.31 ಎಕ್ರೆ ಸ್ಥಿರಾಸ್ತಿ ಇದೆಯೆಂದು ಹೇಳಿ ಕೊಂಡಿದ್ದಾರೆ.

ಭಾಗೀರತಿ ಅಮ್ಮ ನವರ ಮಗ ಗೋಪಾಲ ಕೃಷ್ಣ ಎಂಬವರು ತೀರಿಕೊಂಡ ನಂತರ ಅವರ ಮಗಳಾದ ಚಂದನಾ ಸಿ ಎಂಬವರು ಆರೋಪಿಗಳಾದ ರಂಜಿತ್ , ಸತ್ಯನಾರಾಯಣ, ಹೆಚ್ ಚಂದ್ರಶೇಖರ ಎಂಬವರೊಂದಿಗೆ ಸೇರಿಕೊಂಡು ಸಮಾನ ಉದ್ದೇಶದಿಂದ ಭಾಗೀರತಿ ಅಮ್ಮ ನವರ ಮಗನ ಮರಣ ಪ್ರಮಾಣ ಪತ್ರ ಮಾಡಲು ನಿಮ್ಮ ಸಹಿಯ ಅಗತ್ಯವಿರುವುದಾಗಿ ಹೇಳಿ ಭಾಗೀರತಿ ಅಮ್ಮ ನವರನ್ನು ದಿನಾಂಕ:24/11/2023 ರಂದು  ರಿಜಿಸ್ಟರ್ ಕಛೇರಿ ಶಂಕರನಾರಾಯಣಕ್ಕೆ ಕರೆದುಕೊಂಡು ಹೋಗಿ ಭಾಗೀರತಿ ಅಮ್ಮ ನವರ ಹೆಬ್ಬೆಟ್ಟನ್ನು ಮೋಸದಿಂದ ಹಾಕಿಸಿಕೊಂಡು ಮೇಲ್ಕಂಡ ಸ್ಥಿರಾಸ್ತಿಯನ್ನು ಚಂದನಾ ತನ್ನ ಹೆಸರಿಗೆ ವ್ಯವಸ್ಥಾಪನಾ ಪತ್ರ ಮಾಡಿಕೊಂಡಿದ್ದಾಳೆ ಎಂದು ಭಾಗೀರತಿ ಅಮ್ಮ ನವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಅಮಾಸೆಬೈಲು  ಪೊಲೀಸ್ ಠಾಣೆಯಲ್ಲಿ ಕಲಂ:407,420,423,465,468,r/w 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!