ಉಡುಪಿ: ದಿನಾಂಕ : 11-12-2023(ಹಾಯ್ ಉಡುಪಿ ನ್ಯೂಸ್) ಉಡುಪಿ ಪುತ್ತೂರು ಗ್ರಾಮದ ಮನೆಯೊಂದರ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಕಳ್ಳತನ ನಡೆಸಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಪುತ್ತೂರು ಗ್ರಾಮದ ಶಶಿಕಾಂತ (49) ಎಂಬವರು ರು ಮನೆಯಲ್ಲಿ ದಿನಾಂಕ 09/12/2023 ರಂದು ರಾತ್ರಿ 09:00 ಗಂಟೆಗೆ ಮಲಗಿದ್ದು, ದಿನಾಂಕ 10/12/2023 ರಂದು ಬೆಳಿಗ್ಗೆ 04:30 ಗಂಟೆಗೆ ಎದ್ದು ದೇವರ ದರ್ಶನ ಮಾಡಲು ದೇವರ ಕೋಣೆಗೆ ಹೋದಾಗ ,ದೇವರ ಕೋಣೆಯ ಬಾಗಿಲುಗಳು ತೆರೆದಿದ್ದು, ಒಳಗಿನ ಪೂಜಾ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿದ್ದು ಬಳಿಕ ನೋಡುವಾಗ ದೇವರ ಕೋಣೆಯಲ್ಲಿದ್ದ ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಯಾವುದೋ ಆಯುಧದಿಂದ ಒಡೆದು ಮನೆ ಒಳಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳ್ಳತನವಾದ ಸ್ವತ್ತುಗಳ ಮೌಲ್ಯ 2,50,000/- ರೂಪಾಯಿ ಆಗಿರುತ್ತದೆ ಎಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.