Spread the love

ಕೋಟ:   ದಿನಾಂಕ: 01-12-2023(ಹಾಯ್ ಉಡುಪಿ ನ್ಯೂಸ್) ನೈಲಾಡಿ ಹೊಳೆ ಬಳಿ ಅಕ್ರಮವಾಗಿ ಮರಳನ್ನು ಕಳವು ಮಾಡುತ್ತಿದ್ದ ವ್ಯಕ್ತಿ ಯನ್ನು ಕೋಟ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ಸುಧಾ ಪ್ರಭು ರವರು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಸುಧಾ ಪ್ರಭು ಅವರಿಗೆ  ಬಿಲ್ಲಾಡಿ ಗ್ರಾಮದ ನೈಲಾಡಿ ಹೊಳೆ ಬಳಿ ಅಕ್ರಮವಾಗಿ ಮರಳನ್ನು ನೈಲಾಡಿ ಹೊಳೆಯಿಂದ ಕಳವು ಮಾಡಿ ಪಕ್ಕದಲ್ಲಿರುವ ಜಾಗದಲ್ಲಿ ದಾಸ್ತಾನು ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ  ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ನೈಲಾಡಿ ಬಿಲ್ಲಾಡಿ ಗ್ರಾಮದ ಸಂತೋಷ್ ಎಂಬಾತನು  2 ಯುನಿಟ್‌‌‌‌‌‌‌‌‌‌‌ ಮರಳನ್ನು ಹೊಳೆಯಿಂದ ತೆಗೆದು ಬದಿಯಲ್ಲಿ ರಾಶಿ ಹಾಕಿದ್ದು, ಆರೋಪಿ ಸಂತೋಷ್ ನು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಮರಳನ್ನು ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಕೂಡಿಟ್ಟಿರುವ ಬಗ್ಗೆ ಆತನ ಮೇಲೆ ಕ್ರಮ ಕೈ ಗೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ   ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!