Spread the love

ಕೊಲ್ಲೂರು: ದಿನಾಂಕ : 01-12-2023( ಹಾಯ್ ಉಡುಪಿ ನ್ಯೂಸ್) ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ 7 ಜನರನ್ನು ಕೊಲ್ಲೂರು ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ಜಯಶ್ರೀ ಹುನ್ನೂರ ಅವರು ಬಂಧಿಸಿದ್ದಾರೆ.

ಕೊಲ್ಲೂರು ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಜಯಶ್ರೀ ಹುನ್ನೂರ ಅವರು ದಿನಾಂಕ :30-11-2023 ರಂದು ರೌಂಡ್ಸ್ ಮಾಡುತ್ತಿದ್ದ ಸಮಯದಲ್ಲಿ ಸಾರ್ವಜನಿಕರೊಬ್ಬರು ದೂರವಾಣಿ ಕರೆ ಮಾಡಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪಕ್ಕದಲ್ಲಿರುವ GT ರಸ್ತೆಯ ಕೊಲ್ಲೂರಿನ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಹಲವು ಜನರು ಒಬ್ಬರಿಗೊಬ್ಬರು ಕೈಗಳಿಂದ ದೂಡಾಡಿಕೊಂಡು ಮತ್ತು ಜೋರಾಗಿ ಅವಾಚ್ಯ ಶಬ್ದಗಳಿಂದ  ಬೈದಾಡಿಕೊಳ್ಳುತ್ತಾ ಗಲಾಟೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಬಂದ ಮಾಹಿತಿಯ ಮೇರೆಗೆ ಜಯಶ್ರೀ ಹುನ್ನೂರ ಅವರು ಠಾಣೆಯ ಸಿಬ್ಬಂದಿಯವರೊಂದಿಗೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ತೆರಳಿದಾಗ ಅಲ್ಲಿ 07 ಜನರು ಕೈಗಳಿಂದ ದೂಡಾಡಿಕೊಂಡು ಮತ್ತು ಜೋರಾಗಿ ಅವಾಚ್ಯ ಶಬ್ದಗಳಿಂದ  ಬೈದಾಡಿಕೊಂಡು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು ಎನ್ನಲಾಗಿದೆ.

ಅವರೆಲ್ಲರನ್ನೂ ಸಿಬ್ಬಂದಿಯವರ ಸಹಾಯದಿಂದ ಗಲಾಟೆ ಮಾಡುತ್ತಿದ್ದ ಆಪಾದಿತರಾದ ಅರವಿಂದಾಕ್ಷ, ಮಹೇಶ್, ವಿಜಯ ರಾಘವನ್, ಮೋಹನನ್,  ಶ್ರೀಕಾಂತ್ ,  ಚಂದ್ರಶೇಖರ , ಕೃಷ್ಣ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿರುತ್ತಾರೆ .

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಕಲಂ:160 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!