Spread the love
  • ಮಲ್ಪೆ: ದಿನಾಂಕ:30-11-2023(ಹಾಯ್ ಉಡುಪಿ ನ್ಯೂಸ್) ರಾಯ್ಸನ್‌ ಅಂಟೋನಿ ಬರೆಟ್ಟೊ ಎಂಬವರಿಗೆ ವಿದೇಶದಲ್ಲಿ ಉದ್ಯೋಗದ ವೀಸಾ ದೊರಕಿಸಿ ಕೊಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚಿಸಿ ರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
  • ತೋನ್ಸೆ ಕಲ್ಯಾಣಪುರ ನಿವಾಸಿ ರಾಯ್ಸನ್ ಅಂಟೋನಿ ಬರೆಟ್ಟೊ ಅವರಿಗೆ   ನೇಜಾರು ಗ್ರಾಮದ ಕೆಳಾರ್ಕಳಬೆಟ್ಟು ನಿವಾಸಿ ಓಡ್ರಿನ್ ಡಿಸೋಜಾ ಅವರು ಯು.ಕೆ. ಮತ್ತು ಕೆನಡಾ ದೇಶದ ಉದ್ಯೋಗಗಳಿದ್ದು ಅದಕ್ಕೆ 5,00,000/- ಖರ್ಚಾಗುತ್ತದೆ  ಹಣವನ್ನು 2 ಕಂತುಗಳಲ್ಲಿ ಪಾವತಿಸಬೇಕೆಂದೂ ಹಣ ಪಾವತಿಸಿದೊಡನೆ ವೀಸಾ ಕೊಡುವುದಾಗಿ ತಿಳಿಸಿದಂತೆ ಅದಕ್ಕೆ ರಾಯ್ಸನ್ ಅಂಟೋನಿ ಬರೆಟ್ಟೊ ರವರು ಹಣ ನೀಡಲು ಒಪ್ಪಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
  • ವೀಸಾದ ಸಲುವಾಗಿ ರೂಪಾಯಿ 2,50,000/-  ಬೇಕಾಗಿದ್ದು ಬಹರೈನ್‌ನಲ್ಲಿರುವ ರಾಜು ಕೈತ ಎಂಬುವವರ  ಬ್ಯಾಂಕ್‌ ಖಾತೆಗೆ  ವರ್ಗಾಯಿಸುವಂತೆ ಓಡ್ರಿನ್ ಡಿಸೋಜಾ ತಿಳಿಸಿದ್ದು ಅದೇ ರೀತಿ ರಾಯ್ಸನ್ ಅಂಟೋನಿ ಬರೆಟ್ಟೊರವರು ಆರೋಪಿ ಓಡ್ರಿನ್ ಡಿಸೋಜಾ ಮೊಬೈಲ್‌ನಿಂದ ಆಂದ್ರ ಪ್ರದೇಶದ ರಾಜು ಕೈತ ಇವರಿಗೆ ಮಾತನಾಡಿ ಹಣ ವರ್ಗಾವಣೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಹಣ ನೀಡಿ 3 ತಿಂಗಳು ಕಳೆದರೂ ವೀಸಾ ಮಾಡಿಕೊಡದೇ ಇದ್ದಾಗ ಓಡ್ರಿನ್ ಡಿಸೋಜಾ ನನ್ನು ಭೇಟಿಯಾಗಿ ಹಾಗೂ ರಾಜು ಕೈತ ನಿಗೆ ಕರೆ ಮೂಲಕ ಸಂಪರ್ಕಿಸಿದಾಗ ಬಾಕಿ ಉಳಿದ ಹಣ ರೂಪಾಯಿ 2,50,000/- ವನ್ನು ನೀಡಬೇಕೆಂದು ತಿಳಿಸಿದಂತೆ ರಾಯ್ಸನ್ ಅಂಟೋನಿ ಬರೆಟ್ಟೊರವರು ಅದೇ ಖಾತೆಗೆ ಹಣ ಜಮಾ ಮಾಡಿ ದಾಖಲಾತಿಗಳನ್ನು ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.
  • ಎಲ್ಲಾ ಹಣ ನೀಡಿದ ನಂತರ ದಿನಗಳು ಕಳೆದರೂ ವೀಸಾ ಮಾಡಿಕೊಡದೇ ಇದ್ದಾಗ ಈ ಬಗ್ಗೆ ಸಂಪರ್ಕಿಸಿ ವೀಸಾ ಇಲ್ಲವಾದರೆ ಹಣವನ್ನು ವಾಪಾಸು ಕೊಡಿ ಎಂದು ಕೇಳಿದಾಗ ಬೆದರಿಕೆ ಹಾಕಿರುತ್ತಾರೆ ಎಂದು ರಾಯ್ಸನ್ ಅಂಟೋನಿ ಬರೆಟ್ಟೊರವರು ಪೊಲೀಸರಿಗೆ ದೂರು ನೀಡಿದ್ದಾರೆ.
  • ರಾಯ್ಸನ್ ಅಂಟೋನಿ ಬರೆಟ್ಟೊ ಅವರಿಗೆ ವೀಸಾ ಮಾಡಿಕೊಡದೇ ಹಣ ವಾಪಾಸು ನೀಡದೇ ಮೋಸ ಮತ್ತು ನಂಬಿಕೆ ದ್ರೋಹವನ್ನು ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ .
     
error: No Copying!