Spread the love

ಬ್ರಹ್ಮಾವರ: ದಿನಾಂಕ:29-11-2023 (ಹಾಯ್ ಉಡುಪಿ ನ್ಯೂ ಸ್) ಕಾಂಗ್ರೆಸ್ ಕಾರ್ಯಕರ್ತರೋರ್ವರು ತಮ್ಮ ಕಾರಿಗೆ ಅಂಟಿಸಿದ್ದ ಕಾಂಗ್ರೆಸ್ ಚಿಹ್ನೆ ಯನ್ನು ವ್ಯಕ್ತಿ ಯೋರ್ವ ಬಲವಂತವಾಗಿ ಕಿತ್ತು ತೆಗೆದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆಯೋರ್ವರು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಲ್ಲೂರು ನಿವಾಸಿ ಶೈಲಾ(47) ಎಂಬವರ ಮಗ ಗೌರವ ಎಂಬವರು ಸುಮಾರು 10 ವರ್ಷದಿಂದ ಕಾಂಗ್ರೇಸ್‌ ಪಕ್ಷದ ಕಾರ್ಯಕರ್ತನಾಗಿದ್ದಾರೆ ಎಂದು ದೂರಿನಲ್ಲಿ ಹೇಳಿ ಕೊಂಡಿದ್ದಾರೆ.

ದಿನಾಂಕ: 27.11.2023 ರಂದು ಶೈಲಾ ರವರು ಅವರ ಮಗನ ಜೊತೆ KA53.ML.6000 ನೇ ನೊಂದಣಿ ನಂಬ್ರದ ಕಾರಿನಲ್ಲಿ ಮೆಹಂದಿ ಕಾರ್ಯಕ್ರಮ ಕ್ಕೆಂದು  ಪೇತ್ರಿಯ ಕರ್ಜೆಯಲ್ಲಿರುವ ಅವರ ಪರಿಚಯದ ಸಂತೋಷ ರವರ ಮನೆಗೆ ಹೋಗಿ ಮೆಹೆಂದಿ ಕಾರ್ಯಕ್ರಮ ಮುಗಿಸಿ ದಿನಾಂಕ:28.11.2023 ರಂದು ಬೆಳಗಿನ ಜಾವ ಸಮಯ ಸುಮಾರು 4:00 ಗಂಟೆಗೆ ಶೈಲಾರವರು ಮತ್ತು ಅವರ ಮಗ ವಾಪಾಸ್ಸು ಮನೆಗೆ ಹೋಗಲು ಅವರು ಕಾರು ನಿಲ್ಲಿಸಿದ ಸ್ಥಳಕ್ಕೆ ಬಂದು ಕಾರಿನಲ್ಲಿ ಕುಳಿತು ಹೊರಡುವಾಗ  ಮೆಹಂದಿ ಕಾರ್ಯಕ್ರಮಕ್ಕೆ ಬಂದಿದ್ದ ಆರೋಪಿ ರಾಜೇಶ್‌ ಎಂಬವನು ಶೈಲಾರವರ ಕಾರನ್ನು ಅಡ್ಡಗಟ್ಟಿದ್ದು ಆಗ ಅವರು ಕಾರನ್ನು ನಿಲ್ಲಿಸಿದ್ದು, ಆಗ ಆರೋಪಿ ರಾಜೇಶನು ಕಾರಿನ ಎದುರು ಬಂದು  ಕಾರಿನ ಮುಂದೆ ಅಂಟಿಸಿದ್ದ ಕಾಂಗ್ರೇಸ್‌ ಪಕ್ಷದ  ಚಿಹ್ನೆಯನ್ನು  ತೆಗೆಯುತ್ತಿದ್ದನು ಎಂದಿದ್ದಾರೆ.

ಕೂಡಲೇ ಶೈಲಾರವರು ಮತ್ತು ಅವರ ಮಗ  ಕಾರಿನಿಂದ ಇಳಿದು ಆರೋಪಿ ರಾಜೇಶ್ ನ ಬಳಿ ಬಂದು ಯಾಕೆ ಕಾರಿನಲ್ಲಿ ಅಂಟಿಸಿದ್ದ ಕಾಂಗ್ರೇಸ್‌ ಪಕ್ಷದ  ಚಿಹ್ನೆಯನ್ನು ತೆಗೆಯುತ್ತೀಯಾ ? ಎಂದು ಕೇಳಿರುತ್ತಾರೆ ಎಂದಿದ್ದಾರೆ .ಅದಕ್ಕೆ ಆರೋಪಿ ರಾಜೇಶ್ ನು ನೀವು ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ತೆಗೆಯಿಸಿ, ಇಲ್ಲವಾದರೆ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದು ; ಅಲ್ಲದೇ ಕಾರಿನ ಬಳಿ ಬಂದು ಕಾರಿನ ಎದುರಿನ ಕಾಂಗ್ರೇಸ್‌ ಪಕ್ಷದ  ಚಿಹ್ನೆಯನ್ನು  ಕಿತ್ತು ಬಿಸಾಡಿ ಅಲ್ಲಿಂದ ಹೋಗಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶೈಲಾ ರವರು ಅಲ್ಲಿದ್ದವರ ಹತ್ತಿರ ಆರೋಪಿ ರಾಜೇಶ ನ ಮೊಬೈಲ್‌ ನಂಬ್ರ ತೆಗೆದುಕೊಂಡು ಪೋನ್‌ ಮಾಡಿದಾಗ ಆರೋಪಿ ರಾಜೇಶನು ನಾನೇ ಕಾಂಗ್ರೇಸ್‌ ಪಕ್ಷದ  ಚಿಹ್ನೆಯನ್ನು  ತೆಗೆದಿದ್ದು ಏನು ಮಾಡುತ್ತೀಯಾ, ನಾನು ಜೈಲಿಗೆ ಹೋಗಿ ಬಂದವನು ನನ್ನ ಸುದ್ದಿಗೆ ಬಂದರೆ ನಿಮ್ಮನ್ನು ಕೊಂದು ಹಾಕುತ್ತೇನೆಂದು ಬೆದರಿಕೆ ಹಾಕಿ ಉಡಾಫೆಯಾಗಿ ಮಾತನಾಡಿರುತ್ತಾನೆ ಎಂದು ಶೈಲಾರವರು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ  341, 504, 506  ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!