Spread the love

ನವದೆಹಲಿ: ದಿನಾಂಕ:25-11-2023(ಹಾಯ್ ಉಡುಪಿ ನ್ಯೂಸ್)

ಹದಿನೈದು ವರ್ಷಗಳ ಹಿಂದೆ 2008 ಸೆಪ್ಟೆಂಬರ್ 30 ರಂದು ಮುಂಜಾನೆ ದಕ್ಷಿಣ ದೆಹಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ತನ್ನ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಪ್ರಮುಖ ಸುದ್ದಿ ವಾಹಿನಿ ಯೊಂದರಲ್ಲಿ ಪತ್ರಕರ್ತೆ ಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ವಿಶ್ವನಾಥನ್ ರವರನ್ನು ನಾಲ್ವರು ಆರೋಪಿಗಳು ದರೋಡೆ ಉದ್ದೇಶದಿಂದ ಗುಂಡಿಟ್ಟು ಹತ್ಯೆ ನಡೆಸಿದ್ದರು.

ರಾಷ್ಟ್ರದಾದ್ಯಂತ ಸುದ್ದಿ ಯಾಗಿದ್ದ ಪತ್ರಕರ್ತೆಯ ಈ ಹತ್ಯೆ ಪ್ರಕರಣ ನ್ಯಾಯಾಲಯದಲ್ಲಿ ಹದಿನೈದು ವರ್ಷಗಳ ದೀರ್ಘ ವಿಚಾರಣೆ ನಡೆದಿತ್ತು. 15 ವರ್ಷಗಳ ವಿಚಾರಣೆಯ ಬಳಿಕ ಇಂದು ನಾಲ್ವರು ಅಪರಾಧಿಗಳಿಗೆ ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಇಂದು ತೀರ್ಪು ನೀಡಿದೆ.

ಹತ್ಯೆ ನಡೆಸಿದ ಅಪರಾಧಿಗಳಾದ ರವಿಕಪೂರ್,ಅಮಿತ್ ಶುಕ್ಲಾ, ಬಲ್ಜೀತ್ ಮಲ್ಲಿಕ್ ಮತ್ತು ಅಜಯ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.ಇವರಿಗೆ ಕಾರು ಒದಗಿಸಿ ಸಹಕರಿಸಿದ್ದ ಇನ್ನೋರ್ವ ಆರೋಪಿಗೆ ಮೂರುವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.

error: No Copying!