ಕೋಟ: ದಿನಾಂಕ : 23/11/2023 ( ಹಾಯ್ ಉಡುಪಿ ನ್ಯೂಸ್) ಮೊಳಹಳ್ಳಿ ಗ್ರಾಮದ ಬೆಟ್ಟೇರಿ ಎಂಬಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ನಾಲ್ವರನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ(ತನಿಖೆ) ರಾದ ಸುಧಾ ಪ್ರಭು ರವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಸುಧಾ ಪ್ರಭು ರವರಿಗೆ ಮೊಳಹಳ್ಳಿ ಗ್ರಾಮದ ಬೆಟ್ಟೇರಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಂತೆ ಕೂಡಲೇ ದಾಳಿ ನಡೆಸಿ ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿದ್ದ 1) ಮಹೇಶ್ (34) ,ಬೆಟ್ಟೇರಿ, 2) ಗಣೇಶ್ (33), ಕೋಣಿಹಾರ, 3) ಶಂಕರ (50), ಕೊರ್ಗಿ , 4) ಶರತ್ (47), ಹಂದಾಡಿ ಗ್ರಾಮ ಇವರನ್ನು ಹಿಡಿದು ಬಂಧಿಸಿ ಆಟಕ್ಕೆ ಬಳಸಿದ ನಗದು ಒಟ್ಟು 2,000/- ರೂಪಾಯಿಗಳು, ಕೋಳಿ ಅಂಕಕ್ಕೆ ಬಳಸಿದ 5 ಕೋಳಿ, 5 ಕೋಳಿ ಬಾಳ್ ಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 87, 93 KP ACT ರಂತೆ ಪ್ರಕರಣ ದಾಖಲಾಗಿದೆ.