Spread the love

ಪಡುಬಿದ್ರಿ: ದಿನಾಂಕ: 22-11-2023(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜೂಜು ನಡೆಸುತ್ತಿದ್ದ ಮೂವರನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಸುದರ್ಶನ್ ದೊಡಮನಿ ಯವರು ಬಂಧಿಸಿದ್ದಾರೆ.

ಪಡುಬಿದ್ರಿ ಪೊಲೀಸ್ ಠಾಣೆ ಪಿ.ಎಸ್.ಐ (ತನಿಖೆ) ಯವರಾದ ಸುದರ್ಶನ್ ದೊಡಮನಿ ಯವರಿಗೆ ದಿನಾಂಕ: 20-11-2023 ರಂದು ಪೆರಿಯಕಲ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು  ವ್ಯಕ್ತಿಗಳು ಸೇರಿ ಕೋಳಿಗಳ ಕಾಲಿಗೆ ಬಾಲುಕಟ್ಟಿ, ಕೋಳಿಗಳ ಮೇಲೆ ಹಣವನ್ನು  ಪಣವಾಗಿಟ್ಟು ಜೂಜಾಟ  ಆಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು  ಆ ಕೂಡಲೇ ಅಲ್ಲಿಗೆ ದಾಳಿ  ನಡೆಸಿ ಕೋಳಿ ಅಂಕ ನಡೆಸುತ್ತಿದ್ದ ಸುರೇಶ್ , ಸುಕೇಶ್, ನಾಗೇಶ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ದಾಳಿಯ ವೇಳೆ ಕೆಲವರು ಅಲ್ಲಿಂದ ಓಡಿ ಹೋಗಿರುತ್ತಾರೆ ಎಂದಿದ್ದಾರೆ. ಬಂಧಿತ ಆರೋಪಿಗಳ ವಶದಿಂದ ನಗದು 1,110/- ರೂಪಾಯಿ,  ಜೀವಂತ ಕೋಳಿಗಳು-07, ಸಣ್ಣ ಕತ್ತಿ (ಬಾಳು)-02, ದಾರಗಳು-02 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 87,93 ಕೆ.ಪಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.  

error: No Copying!