ಉಡುಪಿ: ದಿನಾಂಕ:20-11-2023(ಹಾಯ್ ಉಡುಪಿ ನ್ಯೂಸ್)
ಆಟೋ ಚಾಲಕರ ವಿವಿಧ ಸಮಸ್ಯೆ ಗಳನ್ನು ಮುಂದಿಟ್ಟು ಹಾಗೂ ಆಟೋ ರಿಕ್ಷಾಗಳ ಸಿಟಿ ಪರ್ಮಿಟ್ ಗೊಂದಲವನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶ್ರಯದಾತ ಆಟೋ ಯೂನಿಯನ್ ನ ಜಿಲ್ಲಾಧ್ಯಕ್ಷರಾದ ರಮೇಶ್ ಶೆಟ್ಟಿ ಯವರ ಮುಂದಾಳತ್ವದಲ್ಲಿ ರಾಜ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಎಸ್ ಲಾಡ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.