ಶಿರ್ವ: ದಿನಾಂಕ: 18-11-2023 (ಹಾಯ್ ಉಡುಪಿ ನ್ಯೂಸ್) ಶಿರ್ವ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಗಾಂಜಾ ಸೇವನೆ ಮಾಡಿದ್ದ ಇಬ್ಬರು ಯುವಕರನ್ನು ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಕ್ತಿ ವೇಲು ಅವರು ಬಂಧಿಸಿದ್ದಾರೆ.
ಶಿರ್ವ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಶಕ್ತಿ ವೇಲು ಅವರು ದಿನಾಂಕ 13/11/2023 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಮುಂಜಾನೆ 03:30 ಗಂಟೆಗೆ ಕಾಪು ತಾಲೂಕು ಶಿರ್ವ ಗ್ರಾಮದ ಸ್ಯಾಮ್‌ಸ್ಕ್ವಾರ್ ಕಟ್ಟಡದ ಬಳಿ ತಲುಪಿದಾಗ ಅಲ್ಲಿ ಗ್ಲೇನ್ ಪ್ರಾಂಕ್ಲಿನ್ ಮಿನೇಜಸ್ (28) ಮತ್ತು ಶೇಕ್ ಮೊಹಮ್ಮದ್ ಫರಾನ್ (30) ಎಂಬವರು ಇಬ್ಬರು ಇದ್ದರು ಎನ್ನಲಾಗಿದೆ .
ಇವರು ಇಬ್ಬರೂ ಮೇಲ್ನೋಟಕ್ಕೆ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿರುವಂತೆ ಕಂಡು ಬಂದ ಕಾರಣ ಪೊಲೀಸರು ವಿಚಾರಣೆ ನಡೆಸಿದಾಗ ಅವರಿಬ್ಬರು ಸಿಗರೇಟ್‌ನಲ್ಲಿ ಗಾಂಜಾ ತುಂಬಿಸಿ ಸೇದಿರುವುದಾಗಿ ತಿಳಿಸಿದ್ದರಿಂದ ಇಬ್ಬರನ್ನೂ ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಇವರಿಬ್ಬರು ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ದೃಡಪತ್ರ ಬಂದಿದೆ ಎನ್ನಲಾಗಿದೆ,
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS Act ನಂತೆ ಪ್ರಕರಣ ದಾಖಲಾಗಿದೆ.