- ಪಡುಬಿದ್ರಿ: ದಿನಾಂಕ:04-11-2023 (ಹಾಯ್ ಉಡುಪಿ ನ್ಯೂಸ್) ಕಾಂಜರಕಟ್ಟೆ ಕಡೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪಡುಬಿದ್ರಿ ಠಾಣಾ ಪಿಎಸ್ಐ ಯವರಾದ ಪ್ರಸನ್ನ ಎಂ.ಎಸ್ ರವರು ವಶಪಡಿಸಿಕೊಂಡಿದ್ದಾರೆ.
- ಪಡುಬಿದ್ರಿ ಠಾಣಾ ಪಿಎಸ್‌ಐ (ಎಲ್&ಓ) ರವರಾದ ಪ್ರಸನ್ನ ಎಂ . ಎಸ್ ರವರು ದಿನಾಂಕ: 02/11/2023 ರಂದು ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಅಡ್ವೆಯಿಂದ ಕಾಂಜರಕಟ್ಟೆ ಕಡೆಗೆ ತೆರಳುತ್ತಿದ್ದಾಗ ದಿನಾಂಕ: 03/11/2023 ರ ಬೆಳಿಗ್ಗಿನ ಜಾವ ಬೆಳ್ಮಣ್ ಕಾಂಜರಕಟ್ಟೆ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ಅಡ್ವೆ ದ ಮಹಾಗಣಪತಿ ದೇವಸ್ಥಾನದ ಬಳಿ ಕೈಸನ್ನೆ ಮಾಡಿ ನಿಲ್ಲಿಸುವಂತೆ ಸೂಚಿಸಿದಾಗ ಅವರಿಂದ ಸುಮಾರು 100 ಮೀಟರ್ ದೂರ ಹೋಗಿ ನಿಲ್ಲಿಸಿ ಲಾರಿ ಚಾಲಕ ನಂದಿಕೂರು ಗ್ರಾಮದ ಅಡ್ವೆ ಜಂಕ್ಷನ್ ಬಳಿ ಪಲಿಮಾರು ರಸ್ತೆ ಕಡೆಗೆ ಓಡಿ ಹೋಗಿರುತ್ತಾನೆ ಎನ್ನಲಾಗಿದೆ.
- ಪೊಲೀಸರು ಟಿಪ್ಪರ್ ಲಾರಿಯನ್ನು ಪರಿಶೀಲಿಸಿದಾಗ ಲಾರಿ ನಂಬ್ರ KL-57-R-5633 ಆಗಿದ್ದು, ಅದರಲ್ಲಿ ಅಕ್ರಮವಾಗಿ ಸುಮಾರು 10,000/- ರೂಪಾಯಿ ಬೆಲೆಬಾಳುವ ಸುಮಾರು 2 ಯೂನಿಟ್ ನಷ್ಟು ಮರಳು ತುಂಬಿಸಿರುವುದು ಕಂಡು ಬಂದಿರುತ್ತದೆ.
- ಲಾರಿಯಲ್ಲಿ ಮರಳುಗಾರಿಕೆ ಬಗ್ಗೆ ಪರ್ಮಿಟ್ ಆಗಲಿ, ಪರವಾನಿಗೆ ಆಗಲಿ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಕಂಡು ಬಂದಿರುವುದಿಲ್ಲ ಎನ್ನಲಾಗಿದೆ.
- ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 379 ಜೊತೆಗೆ 34 ಐಪಿಸಿ ಮತ್ತು ಕಲಂ: 66 ಜೊತೆಗೆ 192 (ಎ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.