
ಬ್ರಹ್ಮಾವರ: ದಿನಾಂಕ:25-10-2023(ಹಾಯ್ ಉಡುಪಿ ನ್ಯೂಸ್) ಮಹಾರಾಷ್ಟ್ರದಿಂದ ಪನ್ವೇಲ್-ಮಂಗಳೂರು ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರೈಲ್ವೇ ಪ್ರಯಾಣಿಕರೋರ್ವರ ಚಿನ್ನಾಭರಣವನ್ನು ಕಳ್ಳರು ಕಳ್ಳತನ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಬೀದರ್ ನಿವಾಸಿ ಸಾಗರ್ (35) ಎಂಬವರು ದಿನಾಂಕ:5-10-2023ರಂದು ಮಹಾರಾಷ್ಟ್ರದ ಪನ್ವೇಲ್ – ಮಂಗಳೂರು ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಾ ಹೇರಾಡಿ ಗ್ರಾಮದ ಬಾರಕೂರು ರೈಲ್ವೆ ನಿಲ್ದಾಣದಿಂದ ಉಡುಪಿ ರೈಲ್ವೆ ನಿಲ್ದಾಣದ ಮಧ್ಯೆ ಹಾದು ಹೋಗುವ ಸಮಯ ಬೆಳಿಗ್ಗೆ 05:26 ಗಂಟೆಗೆ ಯಾರೋ ಕಳ್ಳರು ಸಾಗರ ರವರ 4,70,000/- ಮೌಲ್ಯದ ನಗದು ಮತ್ತು ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.