Spread the love

ಕಾರ್ಕಳ: ದಿನಾಂಕ:26-10-2023(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಅತ್ತೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ವಿವಾಹಿತ ಮಹಿಳೆ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಶ್ವಿನಿ ಎಂಬವರಿಗೂ ಕಾರ್ಕಳದ ಸಚಿನ್ ಮೂಲ್ಯ ಎಂಬವರಿಗೂ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದೂವರೆ ವರ್ಷದ ಗಂಡು ಮಗುವಿರುತ್ತದೆ ಎಂದೂ ಮದುವೆಯ ಬಳಿಕ ಅಶ್ವಿನಿ ಯವರು ಗಂಡನ ಮನೆಯಾದ ಕಾರ್ಕಳ ತಾಲೂಕು ಮಾಳ ಗ್ರಾಮದ ಮಲ್ಲಾರು ಎಂಬಲ್ಲಿ ವಾಸಮಾಡಿಕೊಂಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ: 14/09/2023 ರಿಂದ ಅಶ್ವಿನಿ ಅವರ ಗಂಡ ಹಾಗೂ ಅತ್ತೆ ಗೀತಾ ಯಾನೆ ಶಕುಂತಲಾ ಅವರು ಅವಾಚ್ಯ ಶಬ್ದಗಳಿಂದ ಬೈದು ಕಿರುಕುಳ ನೀಡುತ್ತಿದ್ದು ಗಂಡ ಸಚಿನ್ ಮೂಲ್ಯನು ಅಶ್ವಿನಿ ಯವರನ್ನು ಬೆಳಗಾಂಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಕೂಡಾ ಅಶ್ವಿನಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು ಎಂದಿದ್ದಾರೆ.

ದಿನಾಂಕ:22/10/2023 ರಂದು ಸಚಿನ್ ಮೂಲ್ಯನು ತನ್ನ ಮಗ ಹಾಗೂ ಹೆಂಡತಿಯೊಂದಿಗೆ ತನ್ನ ಮನೆಯಾದ ಮಾಳಕ್ಕೆ ವಾಪಾಸು ಕರೆ ತಂದಿದ್ದು ಅದೇ ದಿನ ಸಂಜೆ ಗಂಡನಾದ ಸಚಿನ್ ಮೂಲ್ಯನು ಅಶ್ವಿನಿಯವರಿಗೆ ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಅಶ್ವಿನಿ ಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ: 498(A), 323, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!