ಬೈಂದೂರು: ದಿನಾಂಕ:22-10-2023(ಹಾಯ್ ಉಡುಪಿ ನ್ಯೂಸ್) ಬೈಂದೂರು ನಿವಾಸಿ ರಮೇಶ ಎಂಬವರಿಗೆ ಹಾಗೂ ಅವರ ತಮ್ಮಂದಿರಿಗೆ ಬೈಂದೂರಿನ ಲಕ್ಷ್ಮೀಕಾಂತ ಎಂಬವ ನಿರಂತರವಾಗಿ ದೈಹಿಕ ಹಲ್ಲೆ ಮಾಡುತ್ತಿದ್ದು ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ರಮೇಶ್ ರವರು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಂದೂರು ನಿವಾಸಿ ರಮೇಶ (24) ಎಂಬವರ ತಮ್ಮ ಸುರೇಶ ಹಾಗೂ ರಾಜೇಶನಿಗೂ ಮತ್ತು ಲಕ್ಷ್ಮಿಕಾಂತ ಎಂಬವನಿಗೂ ನಾಗೂರು ಬಾರ್ ನಲ್ಲಿ 2022ನೇ ಇಸವಿಯಲ್ಲಿ ಗಲಾಟೆ ಆಗಿದ್ದು, ಅದೇ ವಿಚಾರ ಮುಂದುವರಿದು ಲಕ್ಷ್ಮಿಕಾಂತನು ಸುರೇಶ ಹಾಗೂ ರಾಜೇಶನ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿರುತ್ತಾನೆ. ಆ ನಂತರದಲ್ಲಿ ಲಕ್ಷ್ಮಿಕಾಂತನು ದ್ವೇಷ ಸಾಧಿಸಲು ಪ್ರಾರಂಭಿಸಿರುತ್ತಾನೆ ಎಂದು ರಮೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಆಗಾಗ ಆತನು ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುವುದು, ಜೀವ ಬೆದರಿಕೆ ಹಾಕುವುದು, ರಸ್ತೆಯಲ್ಲಿ ಹೋಗುವಾಗ ಉದ್ದೇಶಪೂರ್ವಕವಾಗಿ ಜೋರಾಗಿ ಕೂಗಿಕೊಂಡು ಹೋಗುತ್ತಿದ್ದನು.ಎಂದಿದ್ದಾರೆ. ಎರಡು ವಾರದ ಮೊದಲು ರಮೇಶರವರ ತಮ್ಮ ಸುರೇಶನು ಸಾಮಾನನ್ನು ತರಲು ಹೋಗುವಾಗ ರಾತ್ರಿ ಸಮಯ ತಮ್ಮ ಸುರೇಶನಿಗೆ ಬೈದು, ಕೈಯಿಂದ ಹೊಡೆದು ಬೆದರಿಸಿದ್ದನು ಎಂದಿದ್ದಾರೆ.
ದಿನಾಂಕ 18/10/2023 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಅಲ್ಸಾಡಿ ಯರುಕೋಣೆ ಶಾಲೆ ಬಳಿ ರಮೇಶ ರವರು ಹಾಗೂ ಸುರೇಶ ಸಾಮಾನು ತೆಗೆದುಕೊಂಡು ಬರುವಾಗ ಲಕ್ಷ್ಮಿಕಾಂತನು ರಸ್ತೆಯಲ್ಲಿ ಮೋಟಾರ್ ಸೈಕಲ ನ್ನು ನಿಲ್ಲಿಸಿಕೊಂಡು ಬೈದು ಕೈಯಿಂದ ರಮೇಶರವರಿಗೆ ಹೊಡೆದು ಹೋಗಿರುತ್ತಾನೆ ಎಂದೂ ,ಲಕ್ಷ್ಮಿಕಾಂತ ಪದೇ ಪದೇ ತೊಂದರೆ, ಕಿರುಕುಳ ನೀಡುತ್ತಿದ್ದಾನೆ ಎಂದು ರಮೇಶ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ರಮೇಶ್ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 323, 504, 506 ಐಪಿಸಿ ಮತ್ತು 3(1)(r) (s), 3(2) (va) SC/ST ACT ರಂತೆ ಪ್ರಕರಣ ದಾಖಲಾಗಿದೆ.